ಉತ್ತರ ಕನ್ನಡದ ಜನತೆಗೆ ಕೊರೋನಾ ಕಾಟ ಅತಿಯಾಗಿದ್ದು ಸೋಂಕಿತರ ಪಟ್ಟಿ ಬೆಳೆಯುತ್ತಲೇ ಇದೆ. ಇಂದು ಈವರೆಗಿನ ಅತಿ ಹೆಚ್ಚು ಸೋಂಕಿತರ ಪ್ರಕರಣ ದಾಖಲಾಗಲಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದು ಜನತೆಯನ್ನು ಭಯದ ಗೂಡಿಗೆ ತಳ್ಳಿದಂತಾಗಿದೆ.
ಇಂದು ಜಿಲ್ಲೆಯಲ್ಲಿ ಇಂದು 40ಕ್ಕೂ ಹೆಚ್ಚು ಕೋವಿಡ್- 19 ಪ್ರಕರಣಗಳು ಪತ್ತೆಯಾಗಿರುವ ಸಾಧ್ಯತೆ ಇದ್ದು, ಜನತೆಯನ್ನು ಕಂಗಾಲು ಮಾಡಿದೆ. ಈ ವರದಿ ಸಂಜೆಯ ಒಳಗಾಗಿ ಹೆಚ್ಚಬಹುದು ಎನ್ನಲಾಗಿದ್ದು ಸಂಜೆಯ ಹೆಲ್ತ ಬುಲೆಟಿನ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಬರುವ ಸಾಧ್ಯತೆ ಇದೆ.
ಭಟ್ಕಳದಲ್ಲಿ 21, ಕುಮಟಾ ನಾಲ್ಕು, ಮುಂಡಗೋಡ ಮೂರು, ಅಂಕೋಲಾ ಐದು, ದಾಂಡೇಲಿ, ಹಳಿಯಾಳದಲ್ಲಿ ತಲಾ ನಾಲ್ಕು ಪ್ರಕರಣ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಹೆಲ್ತ ಬುಲೆಟಿನ್ ರಾತ್ರಿಯ ವೇಳೆಗೆ ಹೊರಬರಲಿದೆ. ಆದರೆ ಉತ್ತರ ಕನ್ನಡದಲ್ಲಿ ಎಲ್ಲರೀತಿಯ ಮುನ್ನೆಚ್ಚರಿಕೆ ಮಾಡಲಾಗುತ್ತಿದೆ. ಅನಾವಶ್ಯಕ ಗೊಂದಲ ಬೇಡ. ಜನತೆಯ ಪ್ರಾಣ ರಕ್ಷಣೆಗೆ ಅಧಿಕಾರಿವರ್ಗ ಶ್ರಮ ವಹಿಸಿ ಕಾರ್ಯಮಾಡುತ್ತಿದ್ದಾರೆ ಎನ್ನಲಾಗಿದೆ.