ಲೈನ್ಸ್ ಕ್ಲಬ್ ಕುಮಟಾದ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಮುಖಂಡ ಸಂಕನೂರು ಲಯನ್ಸ್ ಕ್ಲಬ್ ಕುಮಟವು ಅನೇಕ ಸಾಮಾಜಿಕ ಕಾರ್ಯ ಮಾಡಿದೆ. ಜಗತ್ತಿನಲ್ಲಿ ಕರೋನ ವೈರಸ್ ದಾಳಿ ಹೆಚ್ಚಿದೆ… ಅದೇರೀತಿ ರಾಜ್ಯ ದಲ್ಲಿಯೂ ಕರೋನ ಕೇಸ್ ಹೆಚ್ಚುತ್ತಿದ್ದು ಈ ಸಂದರ್ಭದಲ್ಲಿ ಕುಮಟಾ ಲೈನ್ಸ್ ಕ್ಲಬ್ ಕೋವಿಡ್ -19 ವಿರುದ್ದ ಹೋರಾಡಲು ರೂ. 65 ಸಾವಿರ ದೇಣಿಗೆಯನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಿದ್ದು ಶ್ಲಾಘನೀಯ ವಾದುದು ಎಂದು ಅವರು ಹೇಳಿದರು .
ಜನರ ಸಹಕಾರದಲ್ಲಿ ಮುಖ್ಯಮಂತ್ರಿ ಗಳು ಕೊರೋನಾ ನಿಯಂತ್ರಿಸುವಲ್ಲಿ ಮಾದರಿ ಯಾಗಿದ್ದಾರೆ. ಅಮೇರಿಕದಂತ ದೇಶದಲ್ಲಿ ಕರೋನ ನಿಯಂತ್ರಣ ಕಷ್ಟವಾಗುತ್ತಿದೆ.ದೇಶದಲ್ಲಿಯೇ ಮಹಾರಾಷ್ಟ್ರ. ತಮಿಳುನಾಡು. ದೆಹಲಿಯಲ್ಲಿ ವಿಪರೀತ ಹೆಚ್ಚುತ್ತಿದೆ. ಆದರೆ ಕರ್ನಾಟಕದಲ್ಲಿ ಕರೋನ ನಿಯಂತ್ರಿಸುವಲ್ಲಿ ಶಕ್ತಿ ಮೀರಿ ಮುಖ್ಯ ಮಂತ್ರಿಗಳ ಮುಖಂಡತ್ವದಲ್ಲಿ ಕಾರ್ಯ ನಡೆಯುತ್ತಿದೆ. ಮನುಷ್ಯರು ಪರೋಪಕಾರವೇ ತಮ್ಮ ಧರ್ಮ ಎಂದು ತಿಳಿದಿರಬೇಕು ಲಾಯನ್ಸ್ ಕ್ಲಬ್ ದಂತ ಸಂಸ್ಥೆ ಈ ಕಾರ್ಯ ಮಾಡುತ್ತಿದೆ ಎಂದು ಅವರು ಹೇಳಿದರು.
ನೂತನವಾಗಿ ಲಯನ್ಸ್ ಕ್ಲಬ್ ಕುಮಟಾದ ಪ್ರಥಮ ಮಹಿಳಾ ಅಧ್ಯಕ್ಷೆ ಅಗಿ ಪದ ಗ್ರಹಣ ಮಾಡಿರುವ ವಿನಯ ಎಸ್ ಹೆಗಡೆ ಮಾತನಾಡಿ ಲಯನ್ಸ್ ಕ್ಲಬ್ ಕಳೆದ 46 ವರ್ಷ್ದ ದಿಂದ ಸಾಮಾಜಿಕ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ.. ಕರೋನ ಕುರಿತು ಲಯನ್ಸ್ ಸದಸ್ಯರು ಹಳ್ಳಿ -ಹಳ್ಳಿ ಗೆ ಹೋಗಿ ಜಾಗ್ರತಿ ಮೂಡಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಾಮಾಜಿಕ ಜಾಗ್ರತಿ ಮೂಡಿಸುವಲ್ಲಿ ಕುಮಟಾ ಲಯನ್ಸ್ ಕ್ಲಬ್ ಮುಂಚೂಣಿಯಲ್ಲಿರುವದು ಸಂತಸದ ವಿಷಯ ಎಂದರು. ಲಯನ್ಸ್ ಡಿಸ್ಟ್ರಿಕ್ಟ್ ಗೌರ್ನರ್ ಡಾ. ಗಿರೀಶ್ ಕುಚ್ಚಿ ನಾಡ ಡಾ. ಎಸ್. ಎಸ್. ಹೆಗಡೆಯವರು ಲಯನ್ಸ್ ನೂತನ ಸದಸ್ಯರಾಗಿ ಸೇರ್ಪಡೆ ಆಗಿರುವ ಡಾ. .ನಾಗರಾಜ ಭಟ್. ಎಂ. ಎಂ. ಹೆಗಡೆ. ರವಿ ಪಂಡಿತ. ಕೃಷ್ಣ ಮೂರ್ತಿ ಇವ ರನ್ನು ಸಂಘಕ್ಕೆ ಸ್ವಾಗತಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯ ಕ್ರಮ ದಲ್ಲಿ… ಎಂ. ಎನ್. ಹೆಗಡೆ. ಡಾ.ಜಿ.ಜಿ. ಹೆಗಡೆ. ಡಾ. ಸುರೇಶ ಹೆಗಡೆ. ಡಾ. ವರ್ಣೆಕರ ಮತ್ತಿತರರಿದ್ದರು.