ಹೊಲನಗದ್ದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮುಖ್ಯಾಧ್ಯಾಪಕರಿಗೆ ಬೀಳ್ಕೊಡುಗೆ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾದ ಶ್ರೀಮತಿ ಪಾರ್ವತಿ ನಾಯ್ಕರವರನ್ನು ಶಾಲೆಯ ಶಿಕ್ಷಕ ವೃಂದ, ಎಸ್.ಡಿ.ಎಮ್.ಸಿ, ಅಂಗನವಾಡಿ ಸಿಬ್ಬಂದಿಗಳು, ಅಕ್ಷರ ದಾಸೋಹ ಸಿಬ್ಬಂದಿಗಳು ಗೌರವಾರ್ಪಣೆ ಮಾಡಿ ಬೀಳ್ಕೊಟ್ಟರು. ಕುಮಟಾದ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ರಾಜೇಂದ್ರ ಭಟ್ಟರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೊಂದು ವೃತ್ತಿ ಬದುಕಿನ ಸಾರ್ಥಕ ಕ್ಷಣ. ಈ ಶಾಲೆ ಜಿಲ್ಲಾ ಮಟ್ಟದ ಉತ್ತಮ ಪ್ರಾಯೋಗಿಕ ಶಾಲೆಯಾಗಿ ಆಯ್ಕೆಯಾದ ಶಾಲೆ. ಇಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದೆ. ಈ ಶಾಲೆಯನ್ನು ನೋಡಿದಾಗ ಯಾರಿಗಾದರೂ ಸರ್ಕಾರಿ ಶಾಲೆಗಳ ಬಗ್ಗೆ ಅಭಿಮಾನ ಮೂಡಬೇಕು ಆ ರೀತಿಯಲ್ಲಿ ರೂಪಿಸಿದ್ದೀರಿ. ಅದಕ್ಕಾಗಿ ಇಲ್ಲಿನ ಶಿಕ್ಷಕರನ್ನು ಎಸ್.ಡಿ.ಎಮ್.ಸಿ.ಯವರನ್ನು, ಪಾಲಕರನ್ನು ಇಲಾಖೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾರ್ವತಿ ನಾಯ್ಕರವರು ತಮ್ಮ ಸುಧೀರ್ಘ ವೃತ್ತಿ ಜೀವನದ ಸುಮಧುರ ನೆನಪುಗಳನ್ನು ಹಂಚಿಕೊಂಡರು.
ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ವಾಸುದೇವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಸಿ.ಆರ್.ಪಿ.ಗಳಾದ ಶ್ರೀ ಪ್ರದೀಪ ನಾಯಕ ಉಪಸ್ಥಿತರಿದ್ದರು. ಮಂಗಲಾ ನಾಯ್ಕ ಸ್ವಾಗತಿಸಿದರು. ರವೀಂದ್ರ ಭಟ್ಟ ಸೂರಿ ಪ್ರಾಸ್ತಾವಿಕ ನುಡಿಗಳನ್ನಾಡಿ ನಿರೂಪಿಸಿದರು. ಶ್ಯಾಮಲಾ .ಬಿ. ಪಟಗಾರ ವಂದಿಸಿದರು. ವೀಣಾ ನಾಯ್ಕ, ಶ್ಯಾಮಲಾ ಎಮ್ ಪಟಗಾರ, ದೀಪಾ ನಾಯ್ಕ ಸಹಕರಿಸಿದರು. ಎಸ್.ಡಿ.ಎಮ್.ಸಿ.ಯ ಸರ್ವ ಸದಸ್ಯರು ಹಾಗೂ ಪಾಲಕರು ಸಾಕ್ಷೀಕರಿಸಿದರು.