ಯಲ್ಲಾಪುರ : ಯಲ್ಲಾಪುರದಲ್ಲಿ ಉರುಳುವಲು ಕಟ್ಟಿಗೆ ದರ ಸರಿಸುಮಾರು ಸಾವಿರ ಹತ್ತಿರಕ್ಕೆ ಬಂದಿದೆ ಬಡವರಿಗೆ ಶವಸಂಸ್ಕಾರದ ಸಮಯದಲ್ಲಿ ಕಟ್ಟಿಗೆಯನ್ನು ಸಹ ಸಾಲ ಮಾಡಿ ಖರೀದಿಸುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಪ.ಪಂ ಸದಸ್ಯರಾದ ಸತೀಶ ಎಸ್ ನಾಯ್ಕ ಹಾಗೂ ಸೋಮೇಶ್ವರ ನಾಯ್ಕ ತಿಳಿಸಿದರು.
ಇಂದು ಯಲ್ಲಾಪುರ ವಲಯ ಅರಣ್ಯ ರಕ್ಷಣಾ ಅಧಿಕಾರಿ ಗೋಪಾಲಕೃಷ್ಣ ಹೆಗಡೆ ಅವರಿಗೆ ಉರುವಲು ಕಟ್ಟಿಗೆ ದರವನ್ನು ಇಳಿಸುವಂತೆ ಪ.ಪಂ ಸದಸ್ಯರಾದ ಸೋಮೇಶ್ವರ ನಾಯ್ಕ ಹಾಗೂ ಸತೀಶ ನಾಯ್ಕ ಅವರು ಮನಸಿ ಸಲ್ಲಿಸಿದರು.
ಈ ಬಗ್ಗೆ ಮಾತನಾಡಿದ ಸತೀಶ ನಾಯ್ಕ ಉರುವಲು ಕಟ್ಟಿಗೆ ದರವನ್ನು ಸುಮಾರು ಕ್ವಿಂಟಲ್ ಗೆ 717 ರೂಪಾಯಿ ನಿಗದಿಪಡಿಸಲಾಗಿದೆ ಬಡವರಿಗೆ ಇದರಿಂದ ತುಂಬಾ ಕಷ್ಟವಾಗಲಿದೆ. ಬಡವರ ಹಿತವನ್ನು ಗಮನದಲ್ಲಿಟ್ಟುಕೊಂಡು ಉರುವಲು ಕಟ್ಟಿಗೆ ದರವನ್ನು ಕಡಿಮೆ ಮಾಡಬೇಕು ಎಂದು ವಿನಂತಿಸಿದರು.
ಜಿಲ್ಲಾ ಆಟೋ ಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷರಾದ ಸಂತೋಷ ನಾರಾಯಣ ನಾಯ್ಕ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.