ಯಲ್ಲಾಪುರ : ಯಲ್ಲಾಪುರ ಮೂಲದ ಮಹಾರಾಷ್ಟ್ರ ನಿವಾಸಿ ಅಂದಾಜು 60 ವರ್ಷದ ಮಹಿಳೆ ಯಲ್ಲಾಪುರಕ್ಕೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದು ನಿನ್ನೆ ಮೃತಪಟ್ಟಿದ್ದಳು.
ಆದರೆ ಇದೀಗ ಸಾವಿನ ಬಳಿಕ ಈಕೆಗೆ ಕೊರೋನಾ ದೃಢಪಟ್ಟಿರುವುದಾಗಿ ಜಿಲ್ಲಾಡಳಿತ ದೃಢಪಡಿಸಿದೆ.
ಪತಿಯೊಂದಿಗೆ ಮಹಾರಾಷ್ಟ್ರದಲ್ಲಿ ನೆಲೆಸಿದ್ದ ಈಕೆಯ ಪತಿ ಅನಾರೋಗ್ಯದ ನಿಮಿತ್ತ ಮೃತಪಟ್ಟ ಕಾರಣ ಈಕೆಯನ್ನು ಗಂಡನ ಮನೆಯಾದ ಯಲ್ಲಾಪುರಕ್ಕೆ ಖಾಸಗಿ ವಾಹನದಲ್ಲಿ ಕರೆತರಲಾಗಿತ್ತು.
ಹೃದಯಾಘಾತದಿಂದ ಸಾವನ್ನಪ್ಪಿರುವ ಈಕೆಗೆ ಕೊರೋನಾ ತಗುಲಿತ್ತು. ಈ ಮೊದಲು ಬಂದ ವರದಿಯಲ್ಲೂ ಕೊರೋನಾ ಪಾಸಿಟಿವ್ ಎಂದಿತ್ತು. ಆದರೆ ಈ ವರದಿಯಲ್ಲಿ ತಪ್ಪಾಗಿದೆ ಎಂದು ಭಾವಿಸಿ, ಎರಡನೇ ಬಾರಿಗೆ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಬುಧವಾರ ಬೆಳಿಗ್ಗೆ ಬಂದ ದ್ವಿತೀಯ ವರದಿಯಲ್ಲಿ ಈಕೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.