ಭಟ್ಕಳ: ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ಕೊರೋನಾ ಇಂದು ಉತ್ತರ ಕನ್ನಡಕ್ಕೆ ಸಾವಿನ ಶಾಕ್ ನೀಡಿದೆ. ಭಟ್ಕಳ ಮೂಲದ ಕೊರೋನಾ ಸೋಂಕಿತನ ಸಾವಿನೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಎರಡಕ್ಕೆ ಏರಿದೆ.
ಮೃತ ವೃದ್ಧ 79 ವರ್ಷದ ಪಟ್ಟಣದ ಹೂವಿನ ಚೌಕ ನಿವಾಸಿಯಾಗಿದ್ದ ಅವರು ಮಂಗಳೂರಿನ ಆಸ್ಪತ್ರೆಗೆ ಮೂತ್ರಪಿಂಡದ ಸಮಸ್ಯೆಯಿಂದಾಗಿ ದಾಖಲಾಗಿದ್ದರು. ಈ ವೇಳೆ ಗಂಟಲು ದ್ರವ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿತ್ತು. ಸೋಂಕಿತ ಮಂಗಳೂರು ಆಸ್ಪತೆಯಲ್ಲಿ ಇಂದು ಮೃತಪಟ್ಟಿದ್ದಾಗಿ ವರದಿಯಾಗಿದೆ.