ಕಡತೊಕಾದಲ್ಲಿ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ಸಿಗರು ಪಾಲ್ಗೊಳ್ಳುವ ಮೂಲಕ ಪ್ರತಿಜ್ಞಾ ಕಾರ್ಯಕ್ರಮ ಯಶಸ್ವಿಗೊಂಡಿತು.
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ವೀಕ್ಷಿಸಿದರು. ಕಡತೊಕಾದ ಪ್ರಸಿದ್ಧ ಸ್ವಯಂಭೂ ದೇವಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿಗರು ಸಂವಿಧಾನದ ಪೀಠಿಕೆಯನ್ನು ಓದುವದರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದಾಗಿ ಪ್ರತಿಜ್ಞೆಗೈದರು. ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರಮದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಸೆನಿಟೈಸರ್ ನೀಡಿದ್ದಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಮಾದರಿಯಾಗಿಸಲಾಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀಯುತ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷರುಗಳಾಗಿ ಶ್ರೀಯುತ ಸಲೀಮ ಅಹ್ಮದ್,ಶ್ರೀಯುತ ಈಶ್ವರ ಖಂಡ್ರೆ, ಶ್ರೀಯುತ ಸತೀಶ ಜಾರಕಿಹೊಳಿ ಇವರುಗಳು ಅಧಿಕಾರ ಸ್ವೀಕರಿಸುವ ವಿನೂತನ ಪ್ರತಿಜ್ಞಾ ಕಾರ್ಯಕ್ರಮ ಕೆ ಪಿ ಸಿ ಸಿ ಕಾರ್ಯಾಲಯದಲ್ಲಿ ನಡೆದಿದ್ದು ವಿವಿಧ ಮಾಧ್ಯಮಗಳ ಮುಖಾಂತರ ರಾಜ್ಯಾಧ್ಯಂತ ಪ್ರಸಾರಗೊಂಡಿದೆ ಕೆ ಪಿ ಸಿ ಸಿ ಪ್ರತಿ ಪಂಚಾಯತ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಗ್ರಾಮೀಣ ಪ್ರದೇಶದಲ್ಲೂ ಸಹಿತ ಲಕ್ಷಾಂತರ ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೀಕ್ಷಿಸಿದ್ದು ದಾಖಲೆಯಾಗಿದೆ. ಕಡತೊಕಾದಲ್ಲಿ ನಡೆದ ಪ್ರತಿಜ್ಞಾ ಕಾರ್ಯಕ್ರಮದ ನಂತರ ಸ್ವಯಂಭೂ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ ಪಕ್ಷ ಬಲಗೊಂಡು ಅಧಿಕಾರ ಹಿಡಿಯಲೆಂದು ಪ್ರಾರ್ಥಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಉಪಾಹಾರ ನೀಡಿದ್ದಲ್ಲದೆ ಸಿಹಿ ವಿತರಿಸಿ ಕಾರ್ಯಕರ್ತರು ಸಂಭ್ರಮಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ್ ಸದಸ್ಯೆ ಶ್ರೀಮತಿ ರೂಪಾ ಗೌಡ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಂ ಎಸ್ ಹೆಗಡೆ, ಗ್ರಾ ಪಂ ಮಾಜಿ ಅಧ್ಯಕ್ಷರಾದ ಸುರೇಶ್ ಪಟಗಾರ್ ಮತ್ತು ನಾರಣಪ್ಪ ಗೌಡ, ವಿ ಎಸ್ ಎಸ್ ಉಪಾಧ್ಯಕ್ಷ ರಾಮಚಂದ್ರ ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ನಾಯ್ಕ್,ಕಲಾವತಿ ಗೌಡ, ಉದಯ ಮುಕ್ರಿ, ಕಾಂಗ್ರೆಸ್ ಪ್ರಮುಖರಾದ ಕುಪ್ಪು ಗೌಡ, ಎಲ್ ಎನ್ ಭಟ್, ಶ್ರೀನಾಥ್ ಶೆಟ್ಟಿ , ಬಾಲು ಭಂಡಾರಿ, ಕಿರಣ ಭಂಡಾರಿ, ಶ್ರೀಪತಿ ಶೆಟ್ಟಿ, ಸುಬ್ರಮಣ್ಯ ಹೆಗಡೆ, ಸುಬ್ರಾಯ್ ಗೌಡ, ಮಂಜುನಾಥ್ ಗೌಡ, ಪುಟ್ಟ ಗೌಡ, ಅನಂತ ಪಟಗಾರ್, ಕೃಷ್ಣ ಸಿದ್ದನ್, ರಾಜೇಶ್ ಗುನಗ,ಪಿ ಕೆ ಭಟ್, ರಾಜು ನಾಯ್ಕ್, ಮಹೇಶ್ ಶಿರೂರ್, ಗ್ರಾಮ ಪಂಚಾಯತ್ ಸದಸ್ಯರು, ಸೊಸೈಟಿ ನಿರ್ದೇಶಕರುಗಳು, ಪಕ್ಷದ ಪದಾಧಿಕಾರಿಗಳು ಮತ್ತು ಹಲವರು ಪಾಲ್ಗೊಂಡಿದ್ದರು.