ಕುಮಟಾ : ಕೊರೋನಾ ಮಹಾಮಾರಿಯಿಂದ ವಿಶ್ವದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇದಕ್ಕೆ ನಮ್ಮ ದೇಶವೂ ಹೊರತಾಗಿಲ್ಲ. ಜನಸಾಮಾನ್ಯರು ಕೆಲಸವಿಲ್ಲದೆ ಊಟಕ್ಕೆ ಪರದಾಡುವಂತಹ ಪಿರಿಸ್ಥಿತಿಯಿರುವಾಗ, ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರವನ್ನು ಏರಿಸಿ ಜನಸಾಮಾನ್ಯರ ಜೀವನದ ಮೇಲೆ ಬರೆ ಎಳೆಯುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಇಂದು ಕುಮಟಾ ಬ್ಲಾಕ್ ಕಾಂಗ್ರೆಸ್ ಕುಮಟಾ ವತಿಯಿಂದ ಕುಮಟಾ ತಹಶೀಲ್ದಾರ್ ಕಛೇರಿ ಎದುರು ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು…..
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಮುಖಂಡರುಗಳಾದ ಹೊನ್ನಪ್ಪ ನಾಯಕ, ನಾಗೇಶ್ ನಾಯ್ಕ, ರವಿಕುಮಾರ್ ಎಂ.ಶೆಟ್ಟಿ, ರತ್ನಾಕರ ನಾಯ್ಕ, ಸುರೇಖಾ ವಾರೇಕರ್, ಆರ್. ಹೆಚ್. ನಾಯ್ಕ, ಮುಜಾಫರ್ ಸಾಬ್, ಮಧುಸೂದನ್ ಶೇಟ್, ಎಂ.ಟಿ. ನಾಯ್ಕ, ಮೈಕೆಲ್ ಫರ್ನಾಂಡಿಸ್, ದೀಪ ನಾಯ್ಕ, ಗೀತಾ ಬಂಡಾರ್ಕರ್,ಸಚಿನ್ ನಾಯ್ಕ, ಸಂತೋಷ ನಾಯ್ಕ, ಗಣಪತಿ ಶೆಟ್ಟಿ, ರಾಜೇಶ್ ಪ್ರಭು, ಗಣೇಶ್ ಶೆಟ್ಟಿ, ನಾಗಪ್ಪ ಹರಿಕಂತ್ರ, ನಿತ್ಯಾನಂದ ನಾಯ್ಕ, ರವಿ ಗೌಡ ಮನೋಜ ನಾಯಕ, ವಿಜಯ ವೆರ್ಣೇಕರ್, ಸುನಿಲ್ ನಾಯ್ಕ, ಮುಂತಾದವರು ಹಾಜರಿದ್ದರು…
ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾತನಾಡಿ, ” ಈಗಾಗಲೇ ಕೊರೋನಾದಿಂದ ಜನರು ತತ್ತರಿಸಿ ಹೋಗಿದ್ದಾರೆ, ಊಟಕ್ಕೂ ಪರದಾಡುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಪಟ್ರೊಲ್ ಡೀಸೆಲ್ ಹಾಗೂ ಅಡುಗೆ ಅನಿಲಗಳ ದರವನ್ನು ಸರ್ಕಾರ ದಿನೇ ದಿನೇ ಏರುಸಿತ್ತಿರುವುದರಿಂದ ಜನಜೀವನ ಇನ್ನಷ್ಟು ಹದಗೆಡಲಿದೆ. ಅಲ್ಲದೇ ಕಚ್ಛಾತೈಲಬೆಲೆ ಕನಿಷ್ಠಮಟ್ಟಕ್ಕೆ ಇಳಿದಿರುವಾಗ, ಬೆಲೆ ಏರಿಕೆ ಮಾಡುತ್ತಿರುವ ಸರ್ಕಾರದ ಕ್ರಮ ಜನವಿರೋಧಿಯಾಗಿದೆ. ಆದ್ದರಿಂದ ಸರ್ಕಾರ ಕೂಡಲೆ ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಅನಿಲಗಳ ಬೆಲೆಯನ್ನು ಇಳಿಸಬೇಕು” ಎಂದರು….