ಕಾರವಾರ : ಉ.ಕ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೊಂಕು ಹೆಚ್ಚಾಗುತ್ತಿದ್ದು ಅದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಹೊಸ ನಿಯಮ ರೂಪಿಸಿದೆ. ಇಷ್ಟು ದಿನ ಹೊರ ರಾಜ್ಯದಿಂದ ಬಂದವರಲ್ಲೇ ಸೊಂಕು ಪತ್ತೆಯಾಗುತಿರುವುದನ್ನು ಗಮನಿಸಿ ಮೊದಲು ನಿಯಮ ಮಾಡಿತ್ತು ಆದರೆ ಈಗೀಗ ಹೊರ ಜಿಲ್ಲೆಗಳಿಂದ ಬಂದವರಲ್ಲೂ ಸೊಂಕು ಪತ್ತೆಯಾಗುತ್ತಿದೆ ಎಂಬುದನ್ನು ಮನಗಂಡು ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೆ ಬರುವ ಹೊರ ಜಿಲ್ಲೆಯ ಜನರು ಇಲ್ಲಿ ಮೂರು ದಿನ ಉಳಿಯುವುದಾದಲ್ಲಿ ಕಡ್ಡಾಯವಾಗಿ ಫೀವರ್ ಕ್ಲೀನಿಕ್ ನಲ್ಲಿ ತಪಾಸಣೆಗೊಳಗಾಗಬೇಕೆಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಸೂಚಿಸಿದ್ದಾರೆ.
ಈ ನಿಯಮ ತಪ್ಪಿದಲ್ಲಿ 14 ದಿನ ಕ್ಚಾರಂಟೈನ್ ಹಾಗೂ ಇವರ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.