ಹೊನ್ನಾವರ: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಜನಸಾಮಾನ್ಯರು ಪ್ರಯಾಣಕ್ಕೆ ಬಸ್ ಟೆಂಪೋಗಳನ್ನು ಬಳಸದೆ ಆಟೋವನ್ನು ಹೆಚ್ಚು ಅವಲಂಬಿಸುತ್ತಿದ್ದಾರೆ. ಈ ಸಮಯದಲ್ಲಿ ಆಟೋ ಚಾಲಕರು ಜಾಗೃತೆಯಿಂದಿದ್ದು, ಕೊರೊನಾ ತಡೆಗಟ್ಟಲು ಸಹಕರಿಸುವಂತೆ ಶಾಸಕ ಸುನೀಲ್ ನಾಯ್ಕ ಆಟೋ ಚಾಲಕರಲ್ಲಿ ಮನವಿ ಮಾಡಿದರು.

RELATED ARTICLES  ಸ್ಕೂಟಿಗೆ ಹಿಂಗಡೆಯಿಂದ ಬಂದು ಬಡಿದ ಕಾರು : ದಂಪತಿಗಳು ಗಂಭೀರ.

ಅವರು ತಾಲೂಕಿನ ಮೂಡ್ಕಣಿಯ ಶ್ರೀಶಂಭುಲಿಂಗೇಶ್ವರ ಸಭಾಭವನದಲ್ಲಿ ಶನಿವಾರ ಕೊರೊನಾ ದುರಿತ ಕಾಲದಲ್ಲಿ ಸಂಕಷ್ಟದಲ್ಲಿರುವ ತಾಲೂಕಿನ ಮೂಡ್ಕಣಿ, ಹೆರಂಗಡಿ, ಉಪ್ಪೋಣಿ ಮತ್ತು ನಗರಬಸ್ತಿಕೇರಿ ವ್ಯಾಪ್ತಿಯ 85 ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಲವಳ್ಳಿ ಸೊಸೈಟಿಯ ಅಧ್ಯಕ್ಷ ಜಯಂತ್ ನಾಯ್ಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ, ಗಣೇಶ ಹಳ್ಳೇರ್, ಟಿ.ಟಿ.ನಾಯ್ಕ, ರಮೇಶ ತುಂಬೊಳ್ಳಿ, ತ್ರಿವಿಕ್ರಮ ನಾಯ್ಕ, ಬಿ.ಟಿ.ಗಣಪತಿ, ವಿನಾಯಕ ನಾಯ್ಕ, ಜಗದೀಶ ತುಂಬೊಳ್ಳಿ ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.

RELATED ARTICLES  ದಿನಕರ ಶೆಟ್ಟಿ ಜೊತೆಗೂಡಿದ ಹಲವು ಮುಖಂಡರು.