ಕಾರವಾರ : ನಗರದ ಟ್ಯಾಗೋರ್ ಕಡಲ ತೀರದ ಡ್ರೈವ್ ಇನ್ ಹೊಟೇಲ್ ನ ಗಾಜನ್ನು ಒಡೆದು ಪ್ರವಾಸಿಗರ ಗುಂಪೊಂದು ಶುಕ್ರವಾರ ತಡರಾತ್ರಿ ದಾಂಧಲೆ ನಡೆಸಿದೆ.
ಹುಡುಗಿಯರಿಗೆ ಚುಡಾಯಿಸಿದನ್ನ ಹೊಟೇಲ್ ಸಿಬ್ಬಂದಿ ಪ್ರಶ್ನಿಸಿದ ಕಾರಣಕ್ಕೆ ಈ ರೀತಿ ವರ್ತಿಸಿದ್ದಾರೆ. ಪ್ರವಾಸಕ್ಕೆಂದು ಬಂದಿದ್ದ ಮಂಡ್ಯ ಜಿಲ್ಲೆಯ ಬಿಜಿಎಸ್ ಕಾಲೇಜು ವಿದ್ಯಾರ್ಥಿಗಳ ತಂಡ ದಾಂಧಲೆ ನಡೆಸಿರುವ ಗುಂಪಾಗಿದ್ದು, ರಾತ್ರಿ ಹೊಟೇಲ್ ಬಳಿ ನಿಂತು ಅಲ್ಲಿದ್ದ ಹುಡುಗಿಯರನ್ನ ಚುಡಾಯಿಸಿದ್ದರು. ಇದನ್ನ ಹೊಟೇಲ್ ಸಿಬ್ಬಂದಿ ಪ್ರಶ್ನಿಸಿದ್ದಾಗ ಕುಡಿದ ಮತ್ತಿನಲ್ಲಿದ್ದ ತಂಡ ಹೊಟೇಲ್ ಗ್ಲಾಸ್ ಒಡೆದು ಅಸಭ್ಯವಾಗಿ ವರ್ತಿಸಿದ್ದಾರೆ.
ಈ ವೇಳೆ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ತಂಡದ ೫೪ ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದಿದ್ದಾರೆ