ಭಟ್ಕಳ : ಕೊರೋನಾ ಮಹಾ ಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣವಾದ ಕಾನೂನು ರೂಪಿಸುತ್ತಿವೆ.
ಇಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದಂತೆ ಸೋಂಕು ತೀವ್ರವಾಗಿ ಹರಡುತ್ತಿರುವ ಕಾರಣ ಭಟ್ಕಳಕ್ಕೆ ಹೊರ ಭಾಗದಿಂದ ಯಾರೂ ಹೋಗುವಂತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಜುಲೈ 10ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹೊರ ದೇಶ, ಹೊರ ರಾಜ್ಯ, ಹೊರ ಜಿಲ್ಲೆ ಮತ್ತು ಹೊರ ತಾಲ್ಲೂಕುಗಳಿಂದ ವಾಸ್ತವ್ಯದ ಉದ್ದೇಶಕ್ಕಾಗಿ ಭಟ್ಕಳ ವ್ಯಾಪ್ತಿಗೆ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿದ್ದಾರೆ.ಇದರಿಂದಾಗಿ ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದ ಭಟ್ಕಳದ ಜನತೆ ಮತ್ತೆ ಲಾಕ್ ಆದಂತಾಂಗಿದೆ.
ಕೊರೋನಾ ನಿಯಂತ್ರಣ ಮಾಡಲು ಕಠಿಣ ಕಾನೂನುಗಳೂ ಅಗತ್ಯವಾಗಿದ್ದು ಆಬಗ್ಗೆ ಜಿಲ್ಲಾಡಳಿತದ ನಿರ್ಧಾರ ಸ್ವಾಗತಾರ್ಹವಿದೆ.
ಭಟ್ಕಳದಲ್ಲಿ ಕೋವಿಡ್ 19 ಕರೋನಾ ಮಹಾಮಾರಿಯು ಸಮುದಾಯಕ್ಕೆ ಹರಡುತ್ತಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಇಂದಿನಿಂದಲೇ ಮದ್ಯಾಹ್ನ 2 ಘಂಟೆಯಿಂದ ಬೆಳಿಗ್ಗೆ 6 ಘಂಟೆಯವರೆಗೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ವಿನಾಕಾರಣ ನಿಯಮವನ್ನು ಉಲ್ಲಂಘಿಸುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಎಂದೂ ತಿಳಿಸಲಾಗಿದೆ