ಶಿರಸಿ ಭಾಗದಲ್ಲಿ ನಿಧಾನವಾಗಿ ಪ್ರಸರಿಸಲು ಪ್ರಾರಂಭಿಸಿರುವ covid_19 ಅನ್ನು ಗಮನದಲ್ಲಿರಿಸಿ, ಈ ಭಾಗದ ಅತಿ ದೊಡ್ಡ ವ್ಯಾಪಾರಿ ಸ್ಥಳವಾದ ಟಿಎಸ್ಎಸ್ ಶಿರಸಿಯ ಎಲ್ಲಾ ವ್ಯವಹಾರಗಳನ್ನು ನಾಳೆ 07-07-2020 ಮಂಗಳವಾರದಿಂದ 12-07-2020 ರವಿವಾರದವರೆಗೆ ಸ್ಥಗಿತಗೊಳಿಸಲು ನಿರ್ಣಯಿಸಲಾಗಿದೆ.
ಇದು ಜನರ ಓಡಾಟ ಹಾಗೂ ವ್ಯವಹಾರಿಕವಾಗಿ ಬೃಹತ್ ಪ್ರಮಾಣದಲ್ಲಿ ಸೇರುವುದನ್ನು ನಿಯಂತ್ರಿಸುವುದು ಹಾಗೂ ತನ್ಮೂಲಕ ಇಲ್ಲಿ ಪ್ರಾರಂಭದ ಹಂತದಲ್ಲಿರುವ ಈ ಭೀಕರ ಸಾಂಕ್ರಾಮಿಕ ರೋಗವನ್ನು ಒಂದು ಹಂತದಲ್ಲಿ ನಿಯಂತ್ರಿಸುವ ಯೋಜನೆಯೊಂದಿಗೆ ಸಾಮಾಜಿಕ ಕಳಕಳಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ.
ಈ ಸಮಯದಲ್ಲಿ ಟಿಎಸ್ಎಸ್ ಸೂಪರ್ ಮಾರ್ಕೆಟ್, ಅಡಿಕೆ ವ್ಯಾಪಾರಿ ಅಂಗಳ, ಹಣಕಾಸು ವ್ಯವಹಾರ, ರೈಸ್ ಮಿಲ್ ಸೇರಿದಂತೆ ಎಲ್ಲಾ ವಿಭಾಗಗಳು ಸಂಪೂರ್ಣ ಸ್ತಬ್ಧ ವಿರುತ್ತದೆ.
ಜನರು ಸಹ ಒಂದು ವಾರ ಸ್ವಯಂಪ್ರೇರಿತರಾಗಿ ಸಾಧ್ಯವಾದಷ್ಟು ಓಡಾಟ ನಿಯಂತ್ರಿಸಿ ನಮ್ಮ ನಿರ್ಧಾರದ ಹಿಂದಿರುವ ಕಾಳಜಿ ಹಾಗೂ ಸದ್ಯದ ಪರಿಸ್ಥಿತಿಯ ಗಂಭೀರತೆ ಅರಿತು ಸಹಕರಿಸಬೇಕಾಗಿ ಆಡಳಿಿಿಿತ ಮಂಡಳಿ ವಿನಂತಿಸಿದೆ. ವಿನಂತಿ .
ಈ ಸ್ವಯಂ ಪ್ರೇರಿತ ಬಂದ್ ಟಿಎಸ್ಎಸ್ ನ ಶಿರಸಿಯ ಎಲ್ಲ ವಿಭಾಗಕ್ಕೆ ಅನ್ವಯಿಸುತ್ತಿದ್ದು,… ಸಿದ್ದಾಪುರ, ಯಲ್ಲಾಪುರ, ಹಾಗೂ ಮುಂಡಗೋಡಿನ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.