ಕಾರವಾರ: ಸೋಮವಾರ ಮುಂಜಾನೆ ಕೊರೋನಾ ದೃಢವಾಗಿದ್ದ ವ್ಯಕ್ತಿ ಕೊವಿಡ್ ವಾರ್ಡ ಕಾರವಾರದಲ್ಲಿ ಮೃತಪಟ್ಟಿದ್ದಾರೆ.
೪೨ ವರ್ಷದ ಬೆಂಗಳೂರಿನಿಂದ ವಾಪಾಸ್ಸಾಗಿ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಇಂದು ಬೆಳಿಗ್ಗೆ ಕೊವಿಡ್ ದೃಢಪಟ್ಟಿತ್ತು. ನಂತರ ಇಂದು ಕಾರವಾರಕ್ಕೆ ವರ್ಗಾಯಿಸಲಾಗಿತ್ತು.
ಇದು ಕೋವಿಡ್ ನಿಂದ ಶಿರಸಿಯಲ್ಲಿ ಮೊದಲ ಸಾವಾಗಿದ್ದು ಜನರಲ್ಲಿ ಹೆಚ್ಚಿನ ಭಯ ಹುಟ್ಟಿಸುವ ಜೊತೆಗೆ ಮುನ್ನೆಚ್ಚರಿಕೆಯ ಪಾಲನೆಗೆ ಮತ್ತೆ ಮತ್ತೆ ಎಚ್ಚರಿಸುತ್ತಿದೆ ಎನ್ನಲಾಗಿದೆ.