ಕುಮಟಾ : ಕೊರೋನಾ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ತಾಲೂಕು ಆಡಳಿತ ಕಟ್ಟು ನಿಟ್ಟಿನ ಕ್ರಮ ಕ್ಯೆಗೊಳ್ಳುತ್ತಿದ್ದರೂ ಕೊರೋನಾ ಕಾಯಿಲೆ ಧೃಡ ಪಟ್ಟ ಸೋಂಕಿತರು ತಾವು ಯಾರ ಸಂಪರ್ಕ ಹೊಂದಿದ್ದಾರೆ ಹಾಗೂ ಅವರ ಪ್ರಯಾಣದ ವಿವರಗಳನ್ನು ಬಚ್ಚಿಟ್ಟು ಸುಳ್ಳು ಮಾಹಿತಿ ನೀಡಿದ್ದಲ್ಲಿ ಅಥವಾ ಮುಚ್ಚಿಟ್ಟಲ್ಲಿ ಅವರು ಗುಣಮುಖರಾಗಿ ಬಂದ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಎಮ್ ಅಜಿತ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

RELATED ARTICLES  ತುಳಸಿ ಗುರುಕುಲಕ್ಕೆ ಪ್ರವೇಶಾವಕಾಶ

ಈಗಾಗಲೇ ಕೊರೋನಾ ಕಾಯಿಲೆ ದೃಡಪಟ್ಟ ಕೆಲ ಸೋಂಕಿತರು ತಮ್ಮ ಸಂಪರ್ಕ್ ಹಾಗೂ ಪ್ರಯಾಣದ ಕುರಿತು ಸುಳ್ಳು ಮಾಹಿತಿ ನೀಡಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯವರನ್ನು ಪೇಚಿಗೆ ಸಿಲುಕುಂತೇ ಮಾಡಿದ್ದಾರೆ ಇದರಿಂದಾಗಿ ಕಾಯಿಲೆ ಮೂಲ ಕಂಡು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ನ್ಯೆಜ ಸಂಗತಿ ಮುಚ್ಚಿಡುವ ಕಾರಣ ರೋಗ ಇನ್ನೊಬ್ಬರಿಗೆ ಹರಡಲು ಕಾರಣ ವಾಗುತ್ತಿದ್ದಾರೆ. ಕಾರಣ ಯಾವುದೇ ಕೊರೋನಾ ದೃಡಪಟ್ಟ ಸೋಂಕಿತರು ತಮ್ಮ ಎಲ್ಲಾ ವಿವರಗಳನ್ನು ಪಾರದರ್ಶಕವಾಗಿ ತಿಳಿಸಬೇಕು.

RELATED ARTICLES  ಕುಡಗೋಲಿನಿಂದ ತಾಯಿಯ ಮೇಲೆ ಹಲ್ಲೆ

ಇಲ್ಲವಾದಲ್ಲಿ ಅಂತವರು ಗುಣಮುಖರಾಗಿ ಬಂದ ನಂತರ ಎಪ್ ಅಯ್ ಆರ್ (ಪ್ರಕರಣ ) ದಾಖಲಿಸಲಾಗುವುದು.ಅಲ್ಲದೆ ಕೊರೋನಾ ಕಾಯಿಲೆ ನಿಯಂತ್ರಣ ಕುರಿತು ತಾಲೂಕು ಆಡಳಿತ ನಿಘಾವಹಿಸಿದ್ದು ಸಾರ್ವಜನಿಕರು ಯಾವುದೇ ಆತಂಕ ಪಡಬಾರದು.ಚಿಕಿತ್ಸೆ ಸಂಬಂಧ ಎಲ್ಲಾ ವ್ಯೆಧ್ಯಕೀಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.