ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಮಧ್ಯಾಹ್ನ 2ರಿಂದ ಅಂಕೋಲಾ ಪಟ್ಟಣದಲ್ಲಿ ಸ್ವಯಂಪ್ರೇರಿತವಾಗಿ ಬಂದ್ ಗೆ ನಿಶ್ಚಯಿಸಲಾಗಿದೆ.
ಅಂಕೋಲಾ ತಾಲ್ಲೂಕು ವ್ಯಾಪಾರಸ್ಥರ ಸಂಘವು ತಹಶಿಲ್ದಾರ ಉದಯ ಕುಂಭಾರ ಸಮ್ಮುಖದಲ್ಲಿ ನಿರ್ಣಯ ಕೈಗೊಂಡಿದ್ದು, ಇಂದು ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ಪಟ್ಟಣದಲ್ಲಿ ವ್ಯಾಪಾರ- ವಹಿವಾಟು ನಡೆಯಲಿದೆ.
ಭಟ್ಕಳ, ಕುಮಟಾದ ಬಳಿಕ ಇದೀಗ ಅಂಕೋಲಾ ತಾಲೂಕಿನಲ್ಲೂ ಮಧ್ಯಾಹ್ನದ ನಂತರ ಸ್ವಯಂಚಾಲಿತವಾಗಿ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದೆ.