ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಬುಧವಾರ ನಡೆದ ಸಾರ್ವಜನಿಕರ ಸಭೆಯಲ್ಲಿ ಚರ್ಚಿಸಿದ ಶಾಸಕರುಗಳು ಹಾಗೂ ಮುಖಂಡರು ಹೊನ್ನಾವರ ತಾಲೂಕಿನಲ್ಲಿಯೂ ಬೇರೆ ತಾಲೂಕಿನಂತೆ ಕರೋನಾ ಸೊಂಕು ಹರಡುತ್ತಿರುದರಿಂದ ಸುರಕ್ಷತೆ ಹಾಗೂ ನಿಯತ್ರಂಣಕ್ಕಾಗಿ ಗುರುವಾರದಿಂದ ಮಧ್ಯಾಹ್ನ ೨ರ ನಂತರ ಲಾಕ್ ಡೌನ್ ಜಾರಿ ಮಡುತ್ತಿದ್ದು ಸಾರ್ವಜನಿಕರು ಸಹಕಾರ ನೀಡಬೇಕೆಂದು ತಿಳಿಸಿದ್ದಾರೆ.
ಇದರಿಂದಾಗಿ ಭಟ್ಕಳ,ಕುಮಟಾ,ಅಂಕೋಲಾ ನಂತರ ಇದೀಗ ಕರೋನಾ ತಡೆಯಲು ಸಾರ್ವಜನಿಕರು ಲಾಕ್ ಡೌನ್ ಮಾಡಲು ಸಭೆ ನಡೆಸಿ ತೀರ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ಶಾಸಕರುಗಳಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಜಿ.ಜಿ.ಶಂಕರ್,
ಬಾಲಕೃಷ್ಣ ಬಾಳೇರಿ, ಹುಸೇನ್ ಖಾದ್ರಿ, ಎಂ.ಜಿ.ನಾಯ್ಕ,ದಾಮೋದರ ಮೇಸ್ತ, ಪಿಎಸೈ ಶಶಿಕುಮಾರ ಮತ್ತು ಅಶೋಕ, ವಿಶ್ವನಾಥ ನಾಯಕ, ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಅಂಗಡಿ ಮಾಲೀಕರು, ಸಾರ್ವಜನಿಕರು ಉಪಸ್ಥಿತರಿದ್ದರು.