ಕುಮಟಾ: ಕುಮಟಾದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮಹಾಸತಿ ದೇವಾಲಯದ ಎದುರು ಕಳೆದೆರಡು ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆನೀರು ಸರಾಗವಾಗಿ ಹರಿದು ಚರಂಡಿ ಸೇರುವ ಬದಲು ದೇವಾಲಯದ ಮುಂಭಾಗ ದಲ್ಲಿ ಹಾಗೂ ರಸ್ತೆ ಮೇಲೆ ಹರಿದು ಕೊಳಚೆಯಾಗಿ ಪರಿಣಮಿಸಿತು. ಇದರಿಂದ ಪಟ್ಟಣಕ್ಕೆ ಸಂಚರಿಸುವ ಸಾರ್ವಜನಿಕರಿಗೆ ಒಂದುರೀತಿಯ ಕಿರಿಕಿರಿ ಉಂಟಾಗುತ್ತಿತ್ತು.
ಈ ಸಮಸ್ಯೆಯನ್ನು ಕಂಡು ಕುಮಟಾ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ರಾದ ಸೂರಜ್ ನಾಯ್ಕ ಸೋನಿ ತಕ್ಷಣ ಕುಮಟಾ ಪುರಸಭಾ ಮುಖ್ಯಾಧಿಕಾರಿ ಸುರೇಶ ಎಂ. ಕೆ ಅವರಿಗೆ ಕರೆಮಾಡಿ ತಕ್ಷಣ ಸ್ಥಳಕ್ಕೆ ಕರೆಯಿಸಿ ಸಮಸ್ಯೆಯನ್ನು ಬಗೆ ಹರಿಸುವಂತೆ ಸೂಚಿಸಿದರು.
ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಾಧಿಕಾರಿಗಳು ಕೊಳಚೆ ನೀರು ಚರಂಡಿಯಲ್ಲಿ ಹರಿದುಹೋಗುವಂತೆ ಜೆಸಿಬಿ ಮೂಲಕ ಚರಂಡಿಯ ಹೂಳು ತೆಗೆದು, ಕೊಳಚೆ ನೀರು ಚರಂಡಿಯ ನ್ನು ಸೇರುವಂತೆ ವ್ಯವಸ್ಥೆ ಮಾಡಿದರು.
ಈ ಸಮಸ್ಯೆ ಬಗೆ ಹರಿಯುವ ವರೆಗೂ ಸ್ಥಳದಲ್ಲಿ ಸೂರಜ್ ನಾಯ್ಕ ಇದ್ದರು.