ಹೊನ್ನಾವರ ತಾಲೂಕಲ್ಲಿ ಅಕ್ರಮ ಗೋ ಸಾಗಟ ಮಾಡುತ್ತಿದ್ದ ಕದೀಮನನ್ನು ಸ್ಥಳಿಯರೇ ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ರಾತ್ರಿ 12 ಗಂಟೆ ಸಮಯದಲ್ಲಿ ಅಕ್ರಮ ವಾಗಿ ಗೋವು ಸಾಗಾಣಿಕೆ ಮಾಡುತ್ತಾ ಇರುವುದನ್ನು ಗಮನಿಸಿದ ಸ್ಥಳಿಯರು ತಕ್ಷಣ ಅದನ್ನು ಪರಿಶೀಲಿಸಿದ್ದಾರೆ. ಗೋವುಗಳನ್ನ ಮಾಂಸಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಅಬುಮಾನ ಬಂದು ಆತನನ್ನು ವಿಚಾರಿಸಿದಾಗ ಗೆರಸೊಪ್ಪ ನಗರಿಯ ಮೂಲದವನು ಎಂದು ತಿಳಿದು ಬಂದಿದೆ. ಬಹಳ ದಿನದಿಂದ ಇ ಕೆಲಸವನ್ನು ಮಾಡುತ್ತಾ ಇರುವುದಾಗಿ ತಿಳಿದು ಬಂದಿದ್ದು, ಆರೋಪಿಗಳಲ್ಲಿ ಒಬ್ಬನನ್ನು ಹಿಡಿದುಪೋಲೀಸರಿಗೊಪ್ಪಿಸಲಾಗಿದೆ.
ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹೊನ್ನಾವರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Source: UKExpress