ಕುಮಟಾ : ಬಹುದಿನಗಳಿಂದ ತಾಲೂಕಿನ ಜನರಲ್ಲಿ ಭಯ ಮೂಡಿಸಿ ಹೆಚ್ ಅಗಿ ಕಾಣಿಸಿಕೊಳ್ಳುತ್ತಿದ್ದ ಕೊರೋನಾ ಕಳೆದೆರಡು ದಿನಗಳಿಂದ ಕುಮಟಾ ಹಾಗೂ ಸುತ್ತಲ ಜನತೆಗೆ ಸ್ವಲ್ಪ ನಿಟ್ಟುಸಿರುವ ಬಿಡುವಂತೆ ಮಾಡಿದೆ.
ಜಿಲ್ಲೆಯಲ್ಲಿ ಇಂದು 23 ಮಂದಿಗೆ ಕೋವಿಡ್- 19 ಸೋಂಕು ದೃಢಪಟ್ಟಿದ್ದು, ಕಾರವಾರದಲ್ಲಿ 10, ಸಿದ್ದಾಪುರದಲ್ಲಿ 5, ಹೊನ್ನಾವರ, ಯಲ್ಲಾಪುರದಲ್ಲಿ ತಲಾ 2, ಭಟ್ಕಳ, ಶಿರಸಿ, ಹಳಿಯಾಳ ಹಾಗೂ ಮುಂಡಗೋಡದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ ಎನ್ನಲಾಗಿದೆ. ಸಿದ್ದಾಪುರದಲ್ಲಿ ವೈದ್ಯರಿಗೆ ಕೊರೋನಾ ಪಾಸಿಟೀವ್ ಬಂದಿರುವುದು ಜನತೆಯ ಭಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಎಲ್ಲಾ ಪ್ರಕರಣದಿಂದಾಗಿ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದೆ.
ಕಾರವಾರ ಹಾಪ್ ಲಾಕ್ ಡೌನ್
ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದು,ಕಾರವಾರದಲ್ಲೂ ಸಹ ದಿನೇ ದಿನೇ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಂದಿನಿಂದ ಕಾರವಾರ ನಗರದಲ್ಲಿ ಹಾಪ್ ಡೇ ಲಾಕ್ ಡೌನ್ ಮಾಡಲಾಗಿದೆ.
ಜಿಲ್ಲೆಯ ಭಟ್ಕಳ,ಕುಮಟಾ,ಅಂಕೋಲಾ ಪಟ್ಟಣದಲ್ಲಿ ಈಗಾಗಲೇ ಮಧ್ಯಾಹ್ನ ಲಾಲ್ ಡೌನ್ ಮಾಡಲಾಗಿದೆ. ಇದರ ಬೆನ್ನಲೆ ಇದೀಗ ಕಾರವಾರ ನಗರದಲ್ಲಿನ ಎಲ್ಲಾ ಅಂಗಡಿಗಳು ಮಧ್ಯಾಹ್ನದ ನಂತರ ಬಂದ್ ಆಗಿದೆ.