ಯಲ್ಲಾಪುರ ಬೈಕ್ ಹಾಗೂ ಕಾರ ಮಧ್ಯೆ ನಡೆದ ಅಪಘಾತದಲ್ಲಿ ಮಾಜಿ ಸೈನಿಕನೋರ್ವರು ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗ್ಗೆ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.

ತಾಲ್ಲೂಕಿನ ಅರಬೈಲ್ ಗ್ರಾಮದ ನಿವಾಸಿ ವಿನೋದ ಜಿ ನಾಯ್ಕ (50) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ ಮಾಜಿ ಸೈನಿಕನಾಗಿದ್ದಾರೆ. ವಿನೋದ ನಾಯ್ಕ ಅರಬೈಲ್ ನಿಂದ ಬೈಕ್ ನಲ್ಲಿ ಯಲ್ಲಾಪುರ ಕಡೆಗೆ ಬರುತ್ತಿರುವಾಗ ವೇಗವಾಗಿ ಬಂದ ಕಾರು ಅಪಘಾತ ಪಡಿಸಿದೆ. ಅಪಘಾತದಲ್ಲಿ ವಿನೋದ ನಾಯ್ಕ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ನಾಟಕ ಬರೆಯುವ ಕಲೆಯನ್ನು ಅಳವಡಿಸಿಕೊಂಡಿರುವ ಇವರು ಸುಮಾರು ಹತ್ತಾರು ನಾಟಕಗಳನ್ನು ಬರೆದು ನಾಟಕಗಳನ್ನು ಆಡಿ ತೋರಿಸಿ ತಾಲ್ಲೂಕಿನ ಎಲ್ಲ ಪ್ರೇಕ್ಷಕರ ಮನವನ್ನು ಸೂರೆ ಗೊಂಡಿದ್ದರು.

RELATED ARTICLES  ಮಗನೊಂದಿಗೆ ನೀರಿಗಿಳಿದಿದ್ದ ಗುತ್ತಿಗೆದಾರ ದುರ್ಮರಣ