ಕಾರವಾರ : ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರವಾರದ ಸೋಂಕಿತ ವೃದ್ಧೆ ನಿನ್ನೆ ಸಾವನ್ನಪ್ಪಿದ್ದು ಈ ಮೂಲಕ ಜಿಲ್ಲೆಯಲ್ಲಿ ಮೂರನೆಯ ಸಾವು ಸಂಭವಿಸಿದಂತೆ ಆಗಿದೆ.
71 ವರ್ಷದ ಈ ಸೋಂಕಿತ ವೃದ್ಧೆ ಮಂಗಳೂರಿಗೆ ಹೋಗಿ ಬಂದಿದ್ದರು. ಮೂತ್ರಪಿಂಡದ ಸಮಸ್ಯೆಯಿಂದಾಗಿ ಜಿಲ್ಲಾ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ದಾಖಲಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈಕೆಯನ್ನು ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ಇಂದೂ ಮುಂದುವರಿದ ಕೊರೋನಾ ಆರ್ಭಟ
ಇಂದೂ ಉತ್ತರ ಕನ್ನಡದಲ್ಲಿ 32ಜನರಿಗೆ ಕೊರೋನಾ ಪಾಸಿಟೀವ್ ಬಂದಿದೆ ಎನ್ನಲಾಗಿದೆ. ಅದರಲ್ಲಿ ಕೆಲವು ವರದಿ ಶಿರಸಿಯಲ್ಲಿ ಇದ್ದಿರಬಹುದು ಎನ್ನಲಾಗಿದೆ. ಇದು ಶಿರಸಿಗರ ಇದು ಜನರಿಗೆ ಆತಂಕಕ್ಕೆ ಕಾರಣವಾಗಿದೆ. ಸಂಜೆಯ ಬುಲೆಟಿನ್ ನಲ್ಲಿ ವರದಿ ಪೂರ್ಣವಾಗಿ ಬರಬೇಕಿದೆ.