ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರೊಸ್ ಸಮೀಪ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವ ಸಂಧರ್ಭದಲ್ಲಿ ಪೋಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.

ಹಳಿಯಾಳ ಕಡೆಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ವಾಹನದಲ್ಲಿ 14 ಕೋಣಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದು, ಆರೋಪಿಗಳ ಸಮೇತ ವಾಹನ ಮತ್ತು ಕೋಣಗಳನ್ನು ಯಲ್ಲಾಪುರ ಪೋಲೀಸರು ವಶಪಡಿಸಿಕೊಂಡಿದ್ದಾರೆ.

RELATED ARTICLES  ಶೆಟಗೇರಿಯಲ್ಲಿ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ- ಶ್ರೀವಲ್ಲಿಗೆ ಒಲಿಯಿತು ಸಮಗ್ರ ವೀರಾಗ್ರಣಿ

ಯಲ್ಲಾಪುರ PSI ಮಂಜುನಾಥ ಗೌಡರ್ ನೇತ್ರತ್ವದಲ್ಲಿ ಈ ದಾಳಿ ನಡೆದಿದ್ದು, ಚಾಲಕ ಶಂಬುಲಿಂಗಯ್ಯ ಮತ್ತು ಕ್ಲೀನರ್ ರಮೇಶ ಎಂಬುವವರ ಮೇಲೆ ಪ್ರಕರಣ ದಾಖಲು ಮಾಡಿ ವಾಹನ ವಶಪಡಿಸಿಕೊಳ್ಳಲಾಗಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಹಸುಗೂಸಿನೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ.

Source: UKExpress