ಭಟ್ಕಳ: ಕೊರೋನಾ ಅನೇಕ ಅವಾಂತರಗಳನ್ನು ಸೃಷ್ಟಿಮಾಡುತ್ತಿದ್ದು ಸಾವಿನ ನಂತರ ಕೊರೋನಾ ಇರುವುದು ದೃಢವಾಗುತ್ತಿದ್ದು ಇದು ಅಧಿಕಾರಿಗಳಿಗೆ ಹೊಸ ತಲೆನೋವು ತಂದಿದೆ.

ಭಟ್ಕಳದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 69 ವರ್ಷದ ವ್ಯಕ್ತಿಯ ಮರಣಾನಂತರ ಆತನ ಗಂಟಲು ದ್ರವ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವುದು ಇದೀಗ ವರದಿಯಾಗಿದೆ.

RELATED ARTICLES  ಕುಮಟಾದ ರೈಲ್ ಹೊಟೆಲ್ ಮಾಲಿಕರಾದ ಎಂ.ಜಿ ಭಟ್ಟ ಇನ್ನಿಲ್ಲ

ಇಂದು ಬೆಳಿಗ್ಗೆ ಮೃತ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಮಧ್ಯಾಹ್ನ ಬಂದ ವರದಿಯಲ್ಲಿ ಮೃತನಿಗೆ ಸೋಂಕು ತಗುಲಿತ್ತು ಎಂದು ದೃಢಪಟ್ಟಿದೆ.

RELATED ARTICLES  ಹಿಜಾಬ್ ವಿವಾದ : ತೀರ್ಪು ಪ್ರಕಟಿಸಿದ ಹೈಕೋರ್ಟ್.

‘ಸರ್ಕಾರದ ಆದೇಶದಂತೆ ತಾಲೂಕಾಡಳಿತ, ಪೊಲೀಸ್ ಇಲಾಖೆ ಹಾಗೂ ಪುರಸಭೆ ಅಧಿಕಾರಗಳ ಉಪಸ್ಥಿತಿಯಲ್ಲಿ ಮೃತ ಸೋಂಕಿತನ ಅಂತ್ಯಕ್ರಿಯೆ ನಡೆಸಲಾಗಿದೆ. ಎಲ್ಲಾ ಮುನ್ನೆಚ್ಚರಿಕೆ ಕೈಗೊಂಡಿದ್ದು ಜನತೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.