ಕಾರವಾರ: ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊರೊನಾ ಕಾರಣಕ್ಕಾಗಿ ದಾಖಲಾಗಿ ಚಿಕಿತ್ಸೆ ಪಡೆದ ಆರು ರೋಗಿಗಳು ಗುಣಮುಖರಾಗಿ, ರವಿವಾರ ಇಲ್ಲಿನ ಕ್ರಿಮ್ಸ್‍ನಿಂದ ಬಿಡುಗಡೆ ಮಾಡಲಾಗಿದೆ.
ರವಿವಾರ ಸಂಜೆ ಕೋವಿಡ್ ವಾರ್ಡ್ಬಿನಿಂದ ಬಿಡುಗಡೆಯಾದವರ ಪೈಕಿ ಶಿರಸಿಯ ರಾಜೀವ ನಗರದ 28, 35 ವರ್ಷದ ಪುರುಷರು, ಹಳಿಯಾಳ ತಾಲೂಕಿನ 12ರ ಬಾಲಕಿ, 78ರ ವೃದ್ದ, 72ರ ವೃದ್ದೆ ಹಾಗೂ ಅಂಕೋಲಾದ 27ರ ಯುವಕ ಬಿಡುಗಡೆ ಆದವರು. ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ಇವರನ್ನು ಬೀಳ್ಕೊಟ್ಟರು.