ಬೆಂಗಳೂರು : ಕೊರೊನಾ ಇತರ ವೈರಾಣುಗಳಷ್ಟು ಪರಿಣಾಮಕಾರಿಯಲ್ಲ. ಊರಿನಲ್ಲಿ ಒಬ್ಬರಿಗೆ ಬಂದರೆ, ಇಡೀ ಊರಿಗೆ ರೋಗ ಹರಡುವ ರೋಗಗಳು ಹಿಂದೆ ಬಂದಿವೆ. ಆದರೆ ಕೊರೋನಾ ಹಾಗೆ ಹರಡುವುದಿಲ್ಲ. ಹರಡಿದರೂ ಅಷ್ಟು ಪರಿಣಾಮಕಾರಿಯಲ್ಲ ಎಂದು ಡಾ.ಗಿರಿಧರ ಕಜೆ ಹೇಳಿದರು.

ಉತ್ತರಹಳ್ಳಿಯ ಸಾಧನಾ ಕಾಲೇಜು ಶಿಕ್ಷಕರಿಗಾಗಿ ಆಯೋಜಿಸಿದ್ದ ‘ ಆಯುರ್ವೇದದ ಮೂಲಕ ಕೊರೋನಾ ತಡೆ’ ರಾಷ್ಟ್ರ ಮಟ್ಟದ ವೆಬಿನಾರ್ ಲಿ ಭಾಗವಹಿಸಿ ಮಾತನಾಡುತ್ತಾ, ಒಂದು ಚಿಕ್ಕ ಮನೆಯಲ್ಲಿ ವಾಸಿಸುವ, ಹಾಗೆಯೇ, ಸೋಂಕು ಬಂದವರಲ್ಲಿ 90% ಜನರಿಗೆ ಗುಣಲಕ್ಷಣಗಳೇ ಇರುವುದಿಲ್ಲ. ಉಳಿದ 10% ಜನರಲ್ಲಿ ಕೆಲವರಿಗೆ ಮಾತ್ರ ಐಸಿಯು, ವೆಂಟಿಲೇಟರ್ ಅಗತ್ಯವಿರುತ್ತದೆ. ಅದರಲ್ಲಿ ಕೆಲವರಿಗೆ ಸಾವು ಸಂಭವಿಸುತ್ತಿದೆ. ಹಾಗಾಗಿ ಹೆದರುವ ಅವಶ್ಯಕತೆ ಇಲ್ಲ. ಧೈರ್ಯದಿಂದಿರಬೇಕು. ಕೊರೋನಾ ತಡೆಗೆ ಎಚ್ಚರಿಕೆಯೇ ಸರಿಯಾದ ಅಸ್ತ್ರ ಎಂದರು.

RELATED ARTICLES  2ಜಿ ಹಗರಣ: ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ನ್ಯಾಯಾಲಯ.

ಕೈ ಶುದ್ಧವಾಗಿಟ್ಟುಕೊಳ್ಳುವುದರಿಂದ ನಮಗೂ ಹಿತ, ದೇಶಕ್ಕೂ ಹಿತ. ಅದರಿಂದಾಗಿ ನಾವು ಕೊರೋನಾಮುಕ್ತರಾಗುತ್ತೇವೆ, ದೇಶ ಭ್ರಷ್ಟಾಚಾರಮುಕ್ತವಾಗುತ್ತದೆ ಎಂದ ಅವರು, ನಾವು ಈಗ ರೋಗನಿರೋಧಕಶಕ್ತಿ ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಯಾವುದೋ ಔಷಧಿ ತೆಗೆದುಕೊಳ್ಳುವುದಕ್ಕಿಂತ ದಿನನಿತ್ಯ ಸೇವಿಸುವ ನೀರು, ಹಾಲುಗಳ ಮೌಲ್ಯವರ್ಧನೆ ಮಾಡಿದರೆ ಒಳ್ಳೆಯದು ಎಂದು ನುಡಿದರು.
ನಂತರ ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಆತ್ಮವಿಶ್ವಾಸ ತುಂಬಿದರು. ಸಾಧನಾ‌ಕಾಲೇಜ್ ನ ಪ್ರೊ.ಕೃಷ್ಣಾನಂದಶರ್ಮಾ ಕಾರ್ಯಕ್ರಮ ಆಯೋಜಿಸಿದ್ದರು.
ಕಾಲೇಜ್ ಪ್ರಾಂಶುಪಾಲರಾದ ಪ್ರೊ.ಸಿರಾಜ್ ಉರ್ ರಹಮಾನ್ ಸ್ವಾಗತ ಕೋರಿದರು. ಉಪ ಪ್ರಾಂಶುಪಾಲ ಡಾ.ಅಜಯ್ ಆರ್ ವಂದಿಸಿದರು. ಪ್ರೊ.ಬದರಿನಾಥ್ ಉಪಸ್ಥಿತರಿದ್ದರು. ಪ್ರೊ.ಮಾಲಾ ಹಿರೇಮಠ್ ಪ್ರಾರ್ಥನೆ ಮಾಡಿದರು.
ಬಾಕ್ಸ್
ಡಾ.ಕಜೆ ಸಲಹೆ

RELATED ARTICLES  ಗೋರ್ಣದಲ್ಲಿ ಪ್ರವಾಸಿ ವಾಹನ ಚಾಲಕನ ದರ್ಪ : ಹೋಮ್ ಗಾರ್ಡನನ್ನು ಏನು ಮಾಡಿದ ಗೊತ್ತೇ? ವಿಡಿಯೋ ನೋಡಿ

*ಸಾಮಾಜಿಕ ಅಂತರ ಪಾಲಿಸಿ

  • ಮಾಸ್ಕ್ ಬಳಸಿ
  • ಕೈಯಿಂದ ಮುಖ ಮುಟ್ಟದಿರಿ
  • ಹೊರಗಡೆಯಿಂದ ಮನೆಗೆ ಬಂದಾಗ ಬಟ್ಟೆಯನ್ನು ಬಿಸಿ ನೀರಿನಲ್ಲಿ ಹಾಕಿ, ತೊಳೆಯಿರಿ‌ ಮತ್ತು ಸ್ನಾನ ಮಾಡಿ
    ರೋಗನಿರೋಧಕ ಶಕ್ತಿ ವರ್ಧಿಸುವ ಆಹಾರ ಸೇವಿಸಿ
  • ಕುಡಿಯುವುದಕ್ಕಿಂತ ಮುಂಚೆ, ಹಾಲು, ನೀರಿನ ಮೌಲ್ಯವರ್ಧನೆ ಮಾಡಿಕೊಳ್ಳಿ
  • ರೆಫ್ರಿಜಿಯೇಟರ್, ಎಸಿ ಬಳಕೆ ಬಿಡಿ.
  • ಧೈರ್ಯದಿಂದಿರಿ