ಕುಮಟಾ : ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ವಿವಿಧ ಸಂಘಟನೆಗಳು ಸೇರಿ ಪಕ್ಷಾತೀತವಾಗಿ ನಡೆಸಿದ ಸಾರ್ವಜನಿಕರ ಸಭೆಯಲ್ಲಿ ಪಟ್ಟಣದಲ್ಲಿ ಮತ್ತೆ ಇನ್ನೊಂದು ವಾರದವರೆಗೆ ಹಾಫ್ ಡೇ ಲಾಕ್‌ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ. ತಾಲೂಕಿನಲ್ಲಿ ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಈ ನಿರ್ಣಯ ಕೈಗೊಂಡ ಬಗ್ಗೆ ಶಾಸಕರು ತಿಳಿಸಿದ್ದಾರೆ.
ಬೆಳಿಗ್ಗೆ 5 ರಿಂದ 3 ಗಂಟೆಯ ವರೆಗೆ ವ್ಯಾಪಾರ ವಹಿವಾಟು ನಡೆಯಲಿದೆ. ಸಮಯ 2 ಗಂಟೆಯಿಂದ 3 ಗಂಟೆ ವರೆಗೆ ವಿಸ್ತರಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸಭೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ,ಸೂರಜ್ ನಾಯ್ಕ ಸೋನಿ, ಆರ್. ಜಿ ನಾಯ್ಕ, ಡಾ. ಜಿ.ಜಿ ಹೆಗಡೆ, ಕಾಂಗ್ರೆಸ್ ಮುಖಂಡ ಹೊನ್ನಪ್ಪ ನಾಯಕ, ನಾಗೇಶ ನಾಯಕ, ಪ್ರಮುಖರಾದ ಎಂ ಎಂ ಹೆಗಡೆ, ಹರೀಶ ಶೇಟ್, ಸಂಪತಕುಮಾರ, ಜಗದೀಶ ನಾಯಕ, ಪ್ರಶಾಂತ ಭಟ್, ಡಾ. ಗಣೇಶ ನಾಯ್ಕ, ಸಿಪಿಐ ಪರಮೇಶ್ವರ ಗುನಗಾ, ಹೇಮಂತಕುಮಾರ ಗಾಂವ್ಕರ್, ಮಹೇಶ ನಾಯ್ಕ, ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.