ಕುಮಟಾ: ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಮಾರ್ಚ್ 2020 ರ ಫಲಿತಾಂಶ ಪ್ರಕಟಗೊಂಡಿದ್ದು ಕಾಲೇಜಿನ ಸರಾಸರಿ ಫಲಿತಾಂಶ 97ಶೇಕಡಾ ಆಗಿದೆ. ಒಟ್ಟು 99 ವಿದ್ಯಾರ್ಥಿಗಳಲ್ಲಿ 96 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.


ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು 96 ಶೇಕಡಾ ಫಲಿತಾಂಶ ದಾಖಲಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಂಕಗಳಿಸಿ ಕ್ರಮವಾಗಿ ಎಚ್.ಎಸ್. ವಿಶಾಲ 97.5% (ಲೆಕ್ಕಶಾಸ್ತ್ರ 100, ವ್ಯವಹಾರ ಅಧ್ಯಯನದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100), ಕುಶಿ ಭಟ್ 97.5% (ಲೆಕ್ಕಶಾಸ್ತ್ರ 100, ಸಂಖ್ಯಾಶಾಸ್ತ್ರದಲ್ಲಿ 100), ವೈಷ್ಣವಿ ಮೇಸ್ತ 97.5% (ವ್ಯವಹಾರ ಅಧ್ಯಯನದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100), 600ಕ್ಕೆ 585 ಅಂಕ ಗಳಿಸಿ ಪ್ರಥಮ ಸ್ಥಾನವನ್ನು, ಗೌತಮಿ ಪೈ 97.33% (ವ್ಯವಹಾರ ಅಧ್ಯಯನದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100), 600ಕ್ಕೆ 584 ದ್ವಿತೀಯ ಹಾಗೂ ಕೃತಿಕ ನಾಯಕ 95.33% (ವ್ಯವಹಾರ ಅಧ್ಯಯನದಲ್ಲಿ 100) 572 ಅಂಕ ಗಳಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 6 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಅಂಕಗಳಿಸಿದರೆ, 2 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಅಂಕಗಳಿಸಿದರೆ, 5 ವಿದ್ಯಾರ್ಥಿಗಳು 85ಕ್ಕಿಂತ ಅಧಿಕ ಅಂಕಗಳಿಸಿದರೆ, 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ. ಅಲ್ಲದೇ 5 ವಿದ್ಯಾರ್ಥಿಗಳು ವ್ಯವಹಾರ ಅಧ್ಯಯನದಲ್ಲಿ, 5 ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರದಲ್ಲಿ ಹಾಗೂ 4 ವಿದ್ಯಾರ್ಥಿಗಳು ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದಾರೆ.

RELATED ARTICLES  ವಿಪತ್ತು ಮಿತ್ರ ಯೋಜನೆ ತರಬೇತಿ ಕಾರ್ಯಕ್ರಮ


ವಿಜ್ಞಾನ ವಿಭಾಗದಲ್ಲಿ ಫಲಿತಾಂಶ 97 ಶೇಕಡಾ ದಾಖಲಿಸಿ ಕ್ರಮವಾಗಿ ಬಿ. ಎಮ್ ಧನುಷ್ 96.6% (ಪಿಸಿಎಮ್ 99%, ಪಿಸಿಬಿ 98%, ಗಣಿತ 100) ಪ್ರಥಮ, ಕೃಪಾ ಭಟ್ 96.5% (ಪಿಸಿಎಮ್ 98.66%, ಪಿಸಿಬಿ 97.66%, ಗಣಿತ 100) ದ್ವಿತೀಯ ಹಾಗೂ ಹೇಮಾ ನಾಯಕ 96.16% (ಪಿಸಿಎಮ್ 99%, ಪಿಸಿಬಿ 98%, ಗಣಿತ 100), ಅನಿಕೇತ ಪೈ 96.16% (ಪಿಸಿಎಮ್ 98.33%, ಗಣಿತ 100), ನೂತನ ಕುಮಾರ 96.16% (ಪಿಸಿಎಮ್ 98.66%, ಪಿಸಿಬಿ 98%, ಗಣಿತ 100) ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 6 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಅಂಕಗಳಿಸಿದರೆ, 17 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಅಂಕಗಳಿಸಿದರೆ, 9 ವಿದ್ಯಾರ್ಥಿಗಳು 85ಕ್ಕಿಂತ ಅಧಿಕ ಅಂಕಗಳಿಸಿದರೆ, 6 ವಿದ್ಯಾರ್ಥಿಗಳು 80ಕ್ಕಿಂತ ಅಧಿಕ ಗಳಿಸಿದರೆ, 33 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ. ಅಲ್ಲದೇ ಗಣಿತ ವಿಷಯದಲ್ಲಿ 7 ವಿದ್ಯಾರ್ಥಿಗಳು, ಭೌತಶಾಸ್ತ್ರದಲ್ಲಿ 2 ವಿದ್ಯಾರ್ಥಿಗಳು, ಕಂಪ್ಯೂಟರ್ ಸೈನ್ಸನಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

RELATED ARTICLES  ಸಂಘಟನೆಗಳ ನಿಃಸ್ವಾರ್ಥ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ- ನಾಗರಾಜ ನಾಯಕ ತೊರ್ಕೆ.
img 1594719533742


ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಆಡಳಿತ ಮಂಡಳಿಯವರು, ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.