ಹೊನ್ನಾವರದ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ 2020ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ 95.12% ಆಗಿರುತ್ತದೆ. ವಿಜ್ಞಾನ ವಿಭಾಗದಲ್ಲಿ 96.91% , ವಾಣಿಜ್ಯ ವಿಭಾಗದಲ್ಲಿ 94.01% ಹಾಗೂ ಕಲಾ ವಿಭಾಗದಲ್ಲಿ 93.55%, ಆಗಿರುತ್ತದೆ.
ವಿಜ್ಞಾನ ವಿಭಾಗದಲ್ಲಿ ಶ್ರೇಯಾ ನೀಲಕಂಠ ನಾಯ್ಕ 98.50% (ಪ್ರಥಮ ಸ್ಥಾನ), ಶೃದ್ಧಾ ನಾರಾಯಣ ಹೆಗಡೆ 96.33% (ದ್ವಿತೀಯ ಸ್ಥಾನ), ಸಿಂಧು ಮಹಾಬಲೇಶ್ವರ ಹೆಗಡೆ 96.17% (ತೃತೀಯ ಸ್ಥಾನ)
ವಾಣಿಜ್ಯ ವಿಭಾಗದಲ್ಲಿ ಸನತ್ ಗಜಾನನ ಹೆಗಡೆ 98.00% (ಪ್ರಥಮ ಸ್ಥಾನ), ಸ್ವಾತಿ ದರ್ಶನ ನಾಯಕ 95.83% (ದ್ವಿತೀಯ ಸ್ಥಾನ), ಮತ್ತು ಸತೀಶ ಮಂಜುನಾಥ ತಾಂಡೇಲ್ 95.33% (ತೃತೀಯ ಸ್ಥಾನ)
ಕಲಾ ವಿಭಾಗದಲ್ಲಿ ಸುವರ್ಣ ಗಜಾನನ ನಾಯ್ಕ 94.17% (ಪ್ರಥಮ ಸ್ಥಾನ), ಮೇಘನಾ ಗಣೇಶ ನಾಯ್ಕ 87.33% (ದ್ವಿತೀಯ ಸ್ಥಾನ) ಮತ್ತು ವಿದ್ಯಾ ವಸಂತ ನಾಯ್ಕ 86.50% (ತೃತೀಯ ಸ್ಥಾನ) ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.