ಕುಮಟಾ : ಕೋರನ ವೈರಸ್ ಕಾಟದ ಮದ್ಯೆಯೂ ಡಾ.ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು P.U. C. ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಕಾಲೇಜಿನ N. D. ಶ್ರೇಯಾ 94.83% ಅಂಕದೊಂದಿಗೆ ಪ್ರಥಮ. (ಲೆಕ್ಕ ಶಾಸ್ತ್ರ ಮತ್ತು ಹಿಂದಿ ವಿಷಯ ದಲ್ಲಿ 100 ಅಂಕ )ಶ್ರೀಧರ ಭಟ್ಟ 92.66 %ದ್ವಿತೀಯ(ಲೆಕ್ಕ ಶಾಸ್ತ್ರ ದಲ್ಲಿ 100 ಮತ್ತು ಕಂಪ್ಯೂಟರ್ 99)ಹಾಗೂ mureal ಫರ್ನಾಂಡಿಸ್ 91.66%(ಲೆಕ್ಕ ಶಾಸ್ತ್ರ ದಲ್ಲಿ 100 ಅಂಕ )ಮತ್ತು ಪ್ರಮೋದ ದೀಕ್ಷಿತ್ 91.66 %ಅಂಕದೊಂದಿಗೆ ತೃತೀಯ ಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.54 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ದಲ್ಲಿ ಉತ್ತೀರ್ಣ ರಾಗಿದ್ದು ಇವರನ್ನು ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಎಂ. ವೈ. ಪ್ರಭು. ಕಾರ್ಯದರ್ಶಿ ವಿನೋದ ಪ್ರಭು. ಪದವಿ ಪೂರ್ವ ಪ್ರಾಚಾರ್ಯ ಪ್ರೊಎನ್.ಜಿ . ಹೆಗಡೆ. ಪದವಿ ಪ್ರಾಚಾರ್ಯ ಡಾ.ಎಸ್.ವಿ ಶೇಣ್ವಿ ಅಭಿನಂದಿಸಿದ್ದಾರೆ.