ಕುಮಟಾ : ನೆಲ್ಲಿಕೇರಿ ಹನುಮಂತ ಬೆಣ್ಣೆ ಕಾಲೇಜಿನ ದ್ವಿತೀಯ ಪಿ ಯು ಸಿ 2020 ರ ಕಲಾ ವಾಣಿಜ್ಯ , ವಿಜ್ಞಾನ ವಿಭಾಗದ ಒಟ್ಟು 754 ವಿದ್ಯಾರ್ಥಿಗಳಲ್ಲಿ 663 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿನ ಫಲಿತಾಂಶ 88% ಆಗಿರುತ್ತದೆ. ಕಲಾ ವಿಭಾಗದಲ್ಲಿ 157 ವಿಧ್ಯಾರ್ಥಿಗಳಲ್ಲಿ 128 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದು,,81.5% ಬಂದಿರುತ್ತದೆ. ವಾಣಿಜ್ಯವಿಭಾಗದಲ್ಲಿ 369 ವಿದ್ಯಾರ್ಥಿಗಳಲ್ಲಿ 320 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು,,86.7% ಬಂದಿರುತ್ತದೆ, ವಿಜಾನ ವಿಭಾಗದಲ್ಲಿ 228 ವಿಧ್ಯಾರ್ಥಿಗಳಲ್ಲಿ 215 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದು,,94.33 ಬಂದಿರುತ್ತದೆ, ಕಲಾ ವಿಭಾಗದಲ್ಲಿ 6, ವಾಣಿಜ್ಯವಿಭಾಗದಲ್ಲಿ 30,ಹಾಗೂ ವಿಜಾನ ವಿಭಾಗದಲ್ಲಿ 33 ವಿಧ್ಯಾರ್ಥಿಗಳು ಡಿಸ್ಟಿಂಕ್ಷನನಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಕುಮಾರಿ ನಸೀಮಾ ಭಾನು ಎಮ್ ಸಾಬ 93.66% ಪ್ರಥಮ,ಚೈತ್ರ ಕೇಶವ ಹರಿಕಾಂತ, 93% ದ್ವಿತೀಯ, ವಂದನಾ ಜೆ ಮರಾಠಿ 91.3% ತೃತೀಯ ಫಲಿತಾಂಶ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕುಮಾರಿ ಐಶ್ವರ್ಯ ಗುರುನಾಥ ಶಾನಭಾಗ 93.3% ಪ್ರಥಮ,ಗಣಪತಿ ಎಸ್ ಹೆಗಡೆ ಹಾಗೂ ನೌಶಿಬಾ ರಫೀಕ ಸಾಬ , 92.2% ದ್ವಿತೀಯ, ಅಭಿಶೇಕ ದೀವಗಿ 90.66% ತೃತೀಯ ಫಲಿತಾಂಶ ಪಡೆದಿದ್ದಾರೆ. ವಿಜಾನ ವಿಭಾಗದಲ್ಲಿ ಕುಮಾರಿ ಪಲ್ಲವಿ ವಿನಯಕ ಭಟ 97.33% ಪ್ರಥಮ,ಪೂರ್ಣಿಮಾ ಕಮಲಾಕರ ಪಟಗಾರ, 95 % ದ್ವಿತೀಯ, ವಿನೀತ ವಿಠ್ಠಲರಾಯ ಶೇನ್ವಿ 94.66% ತೃತೀಯ ಫಲಿತಾಂಶ ಪಡೆದಿದ್ದಾರೆ.ಗಣಿತ ವಿಷಯದಲ್ಲಿ 06, ಭೌತಶಾಸ್ತ್ರದಲ್ಲಿ01, ಗಣಕ ವಿಜ್ನಾನದಲ್ಲಿ 02,ಲೆಕ್ಕಶಾಸ್ತ್ರದಲ್ಲಿ 02, ಸಂಸ್ಕøತದಲ್ಲಿ 11 ವಿದ್ಯಾರ್ಥಿಗಳು 100/100 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಉತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳನ್ನು ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ದಿನಕರ ಕೆ ಶೆಟ್ಟಿ, ಹಾಗೂ ಪ್ರಾಂಶುಪಾಲರು,ಉಪನ್ಯಾಸಕರು ಅಭಿನಂದನೆ ಸಲ್ಲಿಸಿರುತ್ತಾರೆ.