ಕುಮಟಾ : ಮಾರ್ಚ 2020 ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಹಿರೇಗುತ್ತಿಯ ಒಟ್ಟು 157 ವಿದ್ಯಾರ್ಥಿಗಳಲ್ಲಿ 152 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ 97.36 ರಷ್ಟು ಫಲಿತಾಂಶವನ್ನು ದಾಖಲಿಸಿದೆ ಅದಲ್ಲದೆ ವಾಣಿಜ್ಯ ಹಾಗೂ ವಿಜ್ಞಾನದಲ್ಲಿ ನೂರಕ್ಕೆ ನೂರುಫಲಿತಾಂಶ ದಾಖಲಿಸುವ ಮೂಲಕ ಕಾಲೇಜಿನ ಇತಿಹಾಸದಲ್ಲೇ ಅತ್ಯಧಿಕ ಫಲಿತಾಂಶ ದಾಖಲಿಸಿದೆ.

RELATED ARTICLES  ಭಟ್ಕಳ ಸಮೀಪ ಸಮುದ್ರದಲ್ಲಿ ಪತ್ತೆಯಾಯ್ತು ಶವ: ಅಪರಿಚಿತ ವ್ಯಕ್ತಿಯ ಮೃತ ದೇಹ ನೋಡಿ ಕೆಲ‌ಕಾಲ ಗೊಂದಲ.

ವಿಜ್ಞಾನ ವಿಭಾಗದಲ್ಲಿ ಪವನಾ ಮಂಜುನಾಥ ನಾಯ್ಕ ಇವಳು 90.66 ಪ್ರಥಮ, ವಾಣಿಜ್ಯ ವಿಭಾಗದಲ್ಲಿ ಎನ್ ಜಿ ಶರತ್ 88 % ದ್ವಿತೀಯ, ಹಾಗೂ ಪೂರ್ಣಿಮಾ ಮಹೇಶ ನಾಯ್ಕ (ವಿಜ್ಞಾನ) ಹಾಗೂ ಪೂಜಾ ಬಾಬು ನಾಯ್ಕ (ವಾಣಿಜ್ಯ) 87 % ತೃತೀಯ ಹಾಗೂ ಕೇಶವ ಬಲಿಯಾ ಗೌಡ 86 % ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

RELATED ARTICLES  ದೈಹಿಕ ಕ್ಷಮತೆ ಹಾಗೂ ಆರೋಗ್ಯ ವೃದ್ಧಿಗೆ ಕ್ರೀಡೆಗಳು ಸಹಕಾರಿ: ಗಜಾನನ ಪೈ

ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಹಾಗೂ ಊರ ನಾಗರಿಕರು ಅಭಿನಂದಿಸಿರುತ್ತಾರೆ.