ಕಾರವಾರ : ಉತ್ತರ ಕನ್ನಡದ ಹಲವೆಡೆ ಕೊರೋನಾ ಆರ್ಭಟ ಮುಂದುವರಿಯುತ್ತಿದ್ದು ಜನತೆ ಕೊರೋನಾ ವರದಿಗಾಗಿ ಕಾದು ಕುಳಿತಿರುವಂತಿದೆ. ಎಷ್ಟು ಪ್ರಕರಣಗಳು ದಾಖಲಾಗಿದೆ? ಎಲ್ಲಿಯ ಜನರಲ್ಲಿ ಕೊರೋನಾ ಪಾಸಿಟೀವ್ ಎಂಬ ಸುದ್ದಿಗಳೇ ಈಗ ಎಲ್ಲೆಡೆ ಸದ್ದು ಮಾಡುತ್ತಿದ್ದು ಜನತೆಯ ಆತಂಕ ಹೆಚ್ಚಿಸುತ್ತಿದೆ.

ಇಂದು 45 ಜನರಿಗೆ ಸೋಂಕು ದೃಢಪಟ್ಟಿದೆ ಎಂಬ ಬಗ್ಗೆ ಅನೇಕ ವರದಿಗಳು ಹರಿದಾಡುತ್ತಿದ್ದು ಅವೆಲ್ಲವೂ ಸಂಜೆಯ ಬುಲೆಟಿನ್ ನಂತರವೇ ನಿಖರವಾಗಲಿದೆ.

ಯಲ್ಲಾಪುರದಲ್ಲಿ 14 ಪ್ರಕರಣ, ಕುಮಟಾದಲ್ಲಿ 5, ಶಿರಸಿಯಲ್ಲಿ 7 ಪ್ರಕರಣ, ಹಳಿಯಾಳದಲ್ಲಿ 12 ಪ್ರಕರಣ ಭಟ್ಕಳದಲ್ಲಿ 1 ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಎಂಬ ಬಗ್ಗೆ ಮಾಹಿತಿಗಳು ಹಾಗೂ ಖಾಸಗೀ ಪತ್ರಿಕೆಯ ವರದಿಗಳು ಹರಿದಾಡುತ್ತಿದೆ.

RELATED ARTICLES  ಪಠ್ಯ– ಪುಸ್ತಕದಲ್ಲಿ ಕಾನೂನು ಪಾಠಗಳನ್ನು ಅಳವಡಿಸಬೇಕು.

ಕುಮಟಾ ತಾಲೂಕಿನ ಹೆರವಟ್ಟಾದ 76 ವರ್ಷದ ಮಹಿಳೆ, ಮತ್ತು ಮಿರ್ಜಾನಿನ 71 ವರ್ಷದ ಮಹಿಳೆ, ಗೋಕರ್ಣದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಖಾಸಗಿ ವೈದ್ಯರ ಕುಟುಂಬದವರ 64 ವರ್ಷ ಮಹಿಳೆ ಮತ್ತು ಉಪ್ಪಿನಗಣಪತಿಯ 34 ವರ್ಷದ ಮಹಿಳೆಗೂ ಸೋಂಕು ತಗುಲಿದ ಬಗ್ಗೆ ಹೇಳಲಾಗಿದೆ.

ಕಳೆದ ಕೆಲ ದಿನಗಳಿಂದ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗದೆ ನಿರಾಳವಾಗಿದ್ದ ಶಿರಸಿಗೆ ಇಂದಿನ ಬುಲೆಟಿನ್ ಘಾತಕನೀಡಬಹುದು ಎಂದು ಹೇಳಲಾಗುತ್ತಿದೆಯಾದರೂ ವರದಿಯ ನಂತರವೇ ಇದು ನಿಖರವಾಗಲಿದೆ.

RELATED ARTICLES  ಬರ್ಗಿಯ ಆದಿತ್ಯ ಪಟಗಾರ ಮುಡಿಗೇರಿದ ಸಿರಿನೆಲ ರಾಜ್ಯೋತ್ಸವ ಪುರಸ್ಕಾರ

ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ ಒಂದರ ಹೊಸಮಾರುಕಟ್ಟೆ ಶಾಖೆಯ ಸಿಬ್ಬಂದಿಗೆ ಈಹಿಂದೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಾಖೆಯನ್ನು ಬಂದ್ ಮಾಡಲಾಗಿತ್ತು. ಈಗ ಬ್ಯಾಂಕ್‌ನ ಮುಖ್ಯ ಶಾಖೆಯ ಮೂವರು ಸಿಬ್ಬಂದಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ನಗರದ ಪ್ರಮುಖ ಎನ್‌ಜಿಒ ಒಂದರ ಮೂವರು ಉದ್ಯೋಗಿಗಳಿಗೂ ಕೊರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ.

ಇಂದು ಸಂಜೆ ಬರುವ ಹೆಲ್ತ್ ಬುಲೆಟಿನ್‌ನಲ್ಲಿ ಈವರದಿಯ ಸತ್ಯಾಸತ್ಯತೆ ತಿಳಿಯಬೇಕಾಗಿದೆ. ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳದೇ ಜನತೆ ತಮ್ಮ ತಮ್ಮ ಜವಾಬ್ದಾರಿ ಅರಿತು ನಡೆಯಬೇಕಿದೆ ಎಂಬುದೇ ನಮ್ಮ ಕಳಕಳಿ.