ಕಾರವಾರ : ಇಂದೂ ಕೂಡಾ ಉತ್ತರ ಕನ್ನಡದಲ್ಲಿ ಕೊರೋನಾ ಆರ್ಭಟ ಮುಂದಿವರೆದಿದ್ದು 76 ಪಾಸಿಟೀವ್ ಹಾಗೂ ಭಟ್ಕಳದಲ್ಲಿ ಕೋರೋನಾ ಸೋಂಕಿತರ ಪ್ರಕರಣಗಳ ಜೊತೆಗೆ ಸಾವಿನ ಸಂಖ್ಯೆಯೂ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದ್ದು, ಇಂದು ಇಬ್ಬರು ಮೃತಪಟ್ಟಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ. ದಾಂಡೇಲಿಯಲ್ಲಿ ಒಂದು ಸಾವಾಗಿರುವುದು ಜನತೆಯ ಭಯಕ್ಕೆ ಕಾರಣವಾಗಿದೆ.

ತೆಂಗಿನಗುಂಡಿ ಹೆಬಳೆಯ 45 ವರ್ಷದ ವ್ಯಕ್ತಿ ಸಾಕಷ್ಟು ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ನಿನ್ನೆ ಕೂಡ ಚಿಕಿತ್ಸೆಗೆ ಬಂದು ದಾಖಲಾಗಿದ್ದರು. ಆದರೆ, ಆರೋಗ್ಯ ತೀರಾ ಹದಗೆಟ್ಟು ತಡರಾತ್ರಿ ಸಾವನ್ನಪ್ಪಿದ್ದರು. ನಿನ್ನೆಯೇ ಮೃತ ವ್ಯಕ್ತಿಯ ಗಂಟಲಲು ದ್ರವವನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂದು ವರದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ದಡ್ಡನೆಂಬ ಹೆಡ್ಡ ಕೀಳರಿಮೆಯಿಂದ ಹೊರಬನ್ನಿ-ಡಾ.ಕೆ.ಆರ್.ಶ್ರೀಧರ

ಯಲ್ಲಾಪುರದಲ್ಲಿ ಸೋಂಕು ದೃಢಪಟ್ಟವರ ಪೈಕಿ ಮೂವರು ಸಾರಿಗೆ ಸಿಬ್ಬಂದಿ, ಓರ್ವ ತಾಲೂಕು ಆಸ್ಪತ್ರೆಯ ಸಿಬ್ಬಂದಿಯೂ ಸೇರಿದ್ದಾರೆ.

ದಾಂಡೇಲಿ- ಹಳಿಯಾಳ ಸೇರಿ 37 ಸೋಂಕು ಪ್ರಕರಣಗಳು ವರದಿಯಾಗಿವೆ. ಯಲ್ಲಾಪುರದಲ್ಲಿ 16, ಶಿರಸಿ 8, ಕುಮಟಾ 6, ಕಾರವಾರ 4, ಮುಂಡಗೋಡದಲ್ಲಿ 3, ಭಟ್ಕಳದಲ್ಲಿ 2 ಪ್ರಕರಣಗಳು ದೃಢಪಟ್ಟಿವೆ.

RELATED ARTICLES  ಹಿಂಸಾತ್ಮಕವಾಗಿ ಎತ್ತುಗಳ ಸಾಗಾಟ : ಆರೋಪಿ ಪರಾರಿ

ಶಿರಸಿಯಲ್ಲಿ ಪ್ರಸಿದ್ಧ ಎನ್ ಜಿ ಒ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಕುಮಟಾ ತಾಲೂಕಿನ ಹೆರವಟ್ಟಾದ ಮಹಿಳೆ, ಮತ್ತು ಮಿರ್ಜಾನಿನ 71 ವರ್ಷದ ಮಹಿಳೆ, ಗೋಕರ್ಣದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ಖಾಸಗಿ ವೈದ್ಯರ ಕುಟುಂಬದವರ 64 ವರ್ಷ ಮಹಿಳೆ ಮತ್ತು ಉಪ್ಪಿನಗಣಪತಿಯ 34 ವರ್ಷದ ಪುರುಷನಿಗೂ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.