ಹೊನ್ನಾವರ: ತಾಲೂಕಿನಲ್ಲಿ ನಡೆದಿದ್ದ ಸರಗಳ್ಳತನದ ಆರೋಪಿಗಳನ್ನು ಬಂಧಿಸಯವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.

ಪಟ್ಟಣದ ಎಮ್ಮೆ ಪೈಲ್ ವ್ಯಾಪ್ತಿಯ ಪೂರ್ಣಿಮಾ ನಾಗರಾಜ ನಾಯ್ಕ ಅವರು ಜುಲೈ 2 ರಂದು ಸಾಯಂಕಾಲ ಹೊನ್ನಾವರ ಮಾರ್ಕೇಟ, ಮನೆಗಳಿಗೆ ಹಾಲನ್ನು ಕೊಟ್ಟು ಮರಳಿ ರಥಬೀದಿ ಮೂಲಕ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ಈ ವೇಳೆ ಎಮ್ಮೆ ಫೈಲ್ ಕ್ರಾಸ್ ಹತ್ತಿರ ತಲುಪಿದಾಗ ಹಿಂದಿನಿಂದ ಬಂದ ಅಪರಿಚಿತ ಬೈಕ್ ಸವಾರರು ಪೂರ್ಣಿಮಾ ಅವರ ಕುತ್ತಿಗೆಗೆ ಕೈ ಹಾಕಿ ಅವರ ಕೊರಳಲ್ಲಿದ್ದ ಸುಮಾರು ಒಂದೂವರೆ ತೊಲೆ ತೂಕದ ಸುಮಾರು 50.000/- ರೂ. ಬೆಲೆಯ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

RELATED ARTICLES  ನೆಹರುನಗರದ ಕಾರ್ಯಕರ್ತರ ಸಭೆಯಲ್ಲಿ ದಿನಕರ ಶೆಟ್ಟಿ ಭಾಗಿ.

ಹೊನ್ನಾವರ ಪೊಲೀಸರು ಮಾಂಗಲ್ಯ ದೋಚಿದ ಆ ಇಬ್ಬರು ಸರಗಳ್ಳರನ್ನು ಹೆಡೆಮುರಿಕಟ್ಟಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಿದ ತಂಡದ ಕಾರ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES  ಸಿದ್ಧಾಪುರದಲ್ಲಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018' ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾಗೇರಿ.