ಮಾರ್ಚ 2020 ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಡಾ.ಎ.ವಿ.ಬಾಳಿಗಾ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಎನ್.ಡಿ ಶ್ರೇಯಾ ಇವಳು 569 (ಶೇಕಡಾ 94.83)ಅಂಕ ಪಡೆದು ಬಾಳಿಗಾ ಕಾಮರ್ಸ್ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ ಲೆಕ್ಕ ಶಾಸ್ತ್ರ ಹಾಗೂ ಹಿಂದಿ ವಿಷಯದಲ್ಲಿ 100 ಕ್ಕೆ100 ಅಂಕ ಪಡೆದು ಸಾಧನೆಯನ್ನು ಮಾಡಿರುತ್ತಾಳೆ ಇವಳು ಮಾದನಗೇರಿಯ ವಿಜಯ ವಿನಾಯಕ ಸ್ಟೋರ್ಸ್ ಅಂಗಡಿಯ ದೀಪಕ ನಾಯಕ ಮಗಳಾಗಿದ್ದು ಇವಳ ಶೈಕ್ಷಣಿಕ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು ಹಾಗೂ ಅಜಯ ಎಮ್.ನಾಯಕ. ಎನ್ ರಾಮು ಹಿರೇಗುತ್ತಿ. ಕಾಂತು ನಾಯ್ಕ .ಮಾದನಗೇರಿ ಯುವಕ ಸಂಘದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.