ಕಾರವಾರ: ಜಿಲ್ಲೆಯಲ್ಲಿ ಇಂದು 51 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 853ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿದೆ.

ಜಿಲ್ಲೆಯಲ್ಲಿ ಇವತ್ತಿನ ಪ್ರಕರಣ 51 ಆಗಿದ್ದು , ನಿನ್ನೆಯ ರಾಜ್ಯದ ಹೆಲ್ತ ಬುಲೆಟಿನ್ ವರದಿಯ 21 ಕೇಸ್ ಗಳನ್ನು ಸೇರಿಸದೇ ಇದ್ದು, ಅದನ್ನು ಇಂದು ಸೇರ್ಪಡಿಸ ಬಹುದಾಗಿದ್ದು, ಒಟ್ಟು 79 ಆಗಿದೆ. ಆದರೆ ಜಿಲ್ಲೆಯ ವರದಿ ಪ್ರಕಾರ ಇಂದಿನ ಸೊಂಕಿತರ ಸಂಖೆ 51 ಆಗಿರುತ್ತದೆ.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 94 ಕರೊನಾ ಕೇಸ್

ಇಂದಿನ ಸೋಂಕಿತರ ವಿವರ – ಶಿರಸಿ 12, ಭಟ್ಕಳ 8, ಹೊನ್ನಾವರ 1, ಅಂಕೋಲಾ 5, ಹಳಿಯಾಳ 17, ಸಿದ್ದಾಪುರ 1, ಕಾರವಾರ 1, ಮುಂಡಗೋಡ 4, ಯಲ್ಲಾಪುರ 2

ನಿನ್ನೆಯ ವರದಿಯೂ ಸೇರಿದಂತೆ ವಿವರ – ಹೊನ್ನಾವರ‌ ಒಂದು, ಕುಮಟಾದಲ್ಲಿ 6, ಶಿರಸಿಯಲ್ಲಿ 16, ಅಂಕೋಲಾದಲ್ಲಿ ಐದು, ಹಳಿಯಾಳದಲ್ಲಿ 27, ಭಟ್ಕಳದಲ್ಲಿ 10, ಕಾರವಾರದಲ್ಲಿ ಒಂದು, ಮುಂಡಗೋಡದಲ್ಲಿ 6, ಸಿದ್ದಾಪುರದಲ್ಲಿ ಒಂದು, ಯಲ್ಲಾಪುರದಲ್ಲಿ 4 ಪ್ರಕರಣ ದೃಢಪಟ್ಟಿದೆ.

ಹೊನ್ನಾವರದಲ್ಲಿ ಹೆಚ್ಚು ಪ್ರಕರಣದ ಬಗ್ಗೆ ಹರಿದಾಡಿದ್ದ ಸುದ್ದಿ

RELATED ARTICLES  ಸಂಪನ್ನವಾಯ್ತು 309ನೇ ದಿನದ "ಗೋಕರ್ಣ ಗೌರವ"

ಗುರುವಾರ ಹೊನ್ನಾವರದಲ್ಲಿ ೨೩ ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಜನತೆಗೆ ಶಾಕ್ ಆಗಲಿದೆ ಎಂಬ ಬಗ್ಗೆ ಸುದ್ದಿ ಹರಿದಾಡಿತ್ತಾದರೂ ಜಿಲ್ಲಾಡಳಿತದ ಹೆಲ್ತ ಬುಲೆಟಿನ್ ನಲ್ಲಿ ಒಂದು ಪ್ರಕರಣ ಎಂದು ದಾಖಲಾಗಿದೆ.

ಪಟ್ಟಣಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಕರಣ ಪತ್ತೆಯಾಗಿದ್ದು ಇನ್ನೊಂದು ಆತಂಕಕಾರಿ ವಿಷಯವಾಗಿದೆ. ಕರಾವಳಿ ಕಾವಲು ಪಡೆಯ ೫೮,೩೯,೪೦,೪೩,೩೩,೩೬ ವರ್ಷದ ಪುರುಷರಿಗೆ ಸೊಂಕು ದೃಡವಾಗುವ ಮೂಲಕ ಹೆಚ್ಚು ಪ್ರಕರಣ ಒಂದೇ ಭಾಗದಲ್ಲಿ ಪತ್ತೆಯಾಗಿದೆ ಎಂಬ ಬಗ್ಗೆಯೂ ಸುದ್ದಿಗಳು ಹರಿದಾಡಿತ್ತು.