ಕುಮಟಾ: ಜನತೆಯ ಭಯಕ್ಕೆ ಕಾರಣವಾಗಿ ತನ್ನ ಬಾಹುಗಳನ್ನು ಚಾಚುತ್ತಾ ಹಬ್ಬುತ್ತಿರುವ ಕುಮಟಾದಲ್ಲಿ ಇಂದು 22 ಪ್ರಕರಣ ದಾಖಲಾಗುವ ಮೂಲಕ ಜನತೆಯ ಭಯ ಹೆಚ್ಚಿಸಿದೆ.
ಕುಮಟಾದ 47 ವರ್ಷದ ಮಹಿಳೆ, ಗುಡೆಅಂಗಡಿಯ 32 ವರ್ಷದ ಮಹಿಳೆ, ಬಾಡದ 54 ವರ್ಷದ ಮಹಿಳೆ, ಮೂರೂರ್ ರೋಡ್ ಸಮೀಪದ 64 ವರ್ಷದ ಪುರುಷ, ಮಣ್ಕಿ ಸಮೀಪದ 59 ವರ್ಷದ ಮಹಿಳೆ, ಕೊಡ್ಕಣಿಯ 53 ವರ್ಷದ ಪುರುಷ, ಶಶಿಹಿತ್ಲದ 30 ವರ್ಷದ ಮಹಿಳೆ, ಗುಂದಾದ 3 ವರ್ಷದ ಮಗು, ಸುಭಾಷ್ ರೋಡ್ ಸಮೀಪದ 67 ವರ್ಷದ ಪುರುಷ, ಹಂದಿಗೋಣಿನ 26 ವರ್ಷದ ಯುವಕ,ಹಳೆ ಬಸ್‌ಸ್ಟ್ಯಾಂಡ್ ಸಮೀಪದ 39 ವರ್ಷದ ಪುರುಷ, ನೆಹರು ನಗರದ 25 ವರ್ಷದ ಯುವಕ, ಧಾರೇಶ್ವರದ 44 ವರ್ಷದ ಮಹಿಳೆ, ಮಣ್ಕಿ ಸಮೀಪದ 62 ವರ್ಷದ ಪುರುಷ, ಹಂದಿಗೋಣಿನ 64 ವರ್ಷದ ಮಹಿಳೆ, ಕುಮಟಾದ 59 ವರ್ಷದ ಪುರುಷ, ಚಿತ್ರಗಿಯ 65 ವರ್ಷದ ಪುರುಷ, ಹಾಗೂ ಇನ್ನೂ ಕೆಲವರಲ್ಲಿ ಮತ್ತು ಒಬ್ಬರು ಖಾಸಗಿ ವೈದ್ಯರಿಗೆ ಕೊರೋನಾ ದೃಢಪಟ್ಟ ಬಗ್ಗೆ ಮಾಹಿತಿ ಬಂದಿದೆ.
ಹೊನ್ನಾವರದಲ್ಲಿ ಇಂದು 19 ಜನರಲ್ಲಿ ಸೋಂಕು ಕಾಣಿಸಿಕೊಂಡ ಬಗ್ಗೆ ಜಿಲ್ಲಾಡಳಿತದ ವರದಿ ಬಂದಿದೆ. ಚಂದಾವರ, ಕಡ್ಲೆ, ಹೊದ್ಕೆಶಿರೂರ, ಹಳದಿಪುರ, ಹಡಿನಬಾಳ, ಅಳ್ಳಂಕಿ, ಅನೀಲಗೋಡ, ಹೊನ್ನಾವರ ಪಟ್ಟಣದ ಬಂದರ ರಸ್ತೆ, ಪ್ರಭಾತನಗರ, ಇನ್ನೂ ಮುಂತಾದ ಸ್ಥಳಗಳಲ್ಲಿ ಕೊರೋನಾ ನಂಜು ಹಬ್ಬಿದೆ.
ಉಳಿದಂತೆ ಭಟ್ಕಳ 9, ಹಳಿಯಾಳ 6
ಶಿರಸಿ 5, ಕಾರವಾರ 5,
ಮುಂಡಗೋಡ 4, ಅಂಕೋಲಾ 4, ಸಿದ್ದಾಪುರ, ಯಲ್ಲಾಪುರ 1 ಪ್ರಕರಣ ದಾಖಲಾಗಿದೆ.
ಜನತೆ ತಮ್ಮ ಎಚ್ಚರಿಕೆ ತಾವು ವಹಿಸಬೇಕಿದ್ದು ಮಾಸ್ಕ ಧರಿಸುವುದು ಹಾಗೂ ಅನಾವಶ್ಯಕ ಓಡಾಟ ನಡೆಸದಂತೆ ಅಧಿಕಾರಿಗಳು ತಿಳಿಸುತ್ತಿದ್ದು ಜನತೆ ಆ ಬಗ್ಗೆ ಗಮನಿಸಬೇಕಿದೆ.