ಕುಮಟಾ : ಪ್ರಗತಿ ಟ್ಯುಟೋರಿಯಲ್ಸ್ ನಲ್ಲಿ ತರಬೇತಿ ಪಡೆದ
ಕುಮಾರಿ ಪಲ್ಲವಿ ವಿನಾಯಕ ಭಟ್ ಈಕೆ ದ್ವಿತೀಯ ಪಿ. ಯು. ಸಿ. ಸೈನ್ಸ್ ವಿಭಾಗದಲ್ಲಿ 97.5% ಅಂಕ ಪಡೆದು ಗಣಿತಕ್ಕೆ 100..ಕಂಪ್ಯೂಟರ್ 100..ಸಂಸ್ಕೃತ ಕ್ಕೆ 100 ಅಂಕಗಳನ್ನು ಪಡೆಯುವುದರ ಮೂಲಕ ಹನುಮಂತ್ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿ ಗೂ, ಪಾಲಕರಿಗೂ, ತರಬೇತಿ ನೀಡಿದ ಪ್ರಗತಿ ಟ್ಯುಟೋರಿಯಲ್ಸ್ ನ ಮುಖ್ಯಸ್ಥರಾದ ಎಂ. ಜಿ. ಭಟ್ ಹಾಗೂ ಅಧ್ಯಾಪಕ ವೃ0ದ ಕ್ಕು ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾಳೆ.
ವಿನಾಯಕ ಭಟ್ ಹಾಗೂ ಮಾಲಾ ಭಟ್ ದಂಪತಿಗಳು ಕೃಷಿಕರಾಗಿದ್ದು ಮಗಳ ಸಾಧನೆ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲಕ್ಷ ಲಕ್ಷ ಹಣವನ್ನು ಖರ್ಚು ಮಾಡಿ ಮಂಗಳೂರು, ಬೆಂಗಳೂರು, ಗಳಲ್ಲಿ ಓದಿಸಿ ದರೆ ಮಾತ್ರ ಮಕ್ಕಳು ಚೆನ್ನಾಗಿ ಓದುತ್ತಾರೆ ಎಂಬ ಕೆಲ ಜನರ ಅಂಬೋಣಕ್ಕೆ ವಿರುದ್ದ ವಾಗಿ ಸರಕಾರಿ ಕಾಲೇಜಿನಲ್ಲಿ ಓದಿ ಸ್ಥಳೀಯ ಸಂಸ್ಥೆ ಪ್ರಗತಿ ಟ್ಯುಟೋರಿಯಲ್ಸ್ ನಲ್ಲಿ ತರಬೇತಿ ಪಡೆದು ಇಷ್ಟು ದೊಡ್ಡ ಸಾಧನೆ ಮಾಡಿದ್ದು ಎಲ್ಲರಿಗು ಹೆಮ್ಮೆ ಎನಿಸುತ್ತದೆ.