ಹೊನ್ನಾವರ : ಕೊರೋನಾ ಕರಿನೆರಳು ಎಲ್ಲೆಡೆ ಚಾಚಿದ್ದರೂ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಹಂಬಲಿಸಿದ ಶಿಕ್ಷಕರ ಪ್ರಯತ್ನದ ಫಲವೇ ಹೊಸ ಹುಟ್ಟು ಪಡೆದ ವಾಟ್ಸಪ್ ಶಾಲೆ..!

ಹೌದು, ಹೊನ್ನಾವರದ ಹೊಸಾಕುಳಿಯ ಶಿಕ್ಷಕ, ಸಾಹಿತಿ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ಸಂದೀಪ ಭಟ್ಟ ಹೊಸಾಕುಳಿ ಇವರ ಕನಸಿನ ಸಾಕಾರವೇ ಈ ವಾಟ್ಸಪ್ ಶಾಲೆ.

ಏನಿದು ವಾಟ್ಸಪ್ ಶಾಲೆ..?

ಮಗುವಿಗೆ ಅಗತ್ಯ ಜ್ಞಾನ ಒದಗಿಸಲು ಸಂದೀಪ ಭಟ್ಟ ರಚಿಸಿದ ಹೊಸ ಮಾದರಿಯ ಶಾಲೆಯೇ ವಾಟ್ಸಪ್ ಶಾಲೆ. ಅಂದರೆ ಶಾಲೆಯಂತೆಯೇ ಇಲ್ಲಿ ಎಲ್ಲವೂ ಇದೆ. ಶಿಕ್ಷಕರು ವಿವಿಧ ಅವಧಿ ತೆಗೆದುಕೊಳ್ಳುವುದು ಅಷ್ಟೇ ಅಲ್ಲ. ನಿತ್ಯದ ಪ್ರಾರ್ಥನೆ, ರಾಷ್ಟ್ರಗೀತೆ, ಗಾದೇಮಾತು, ನಿತ್ಯ ಪಂಚಾಂಗ ಎಲ್ಲವೂ ಇದರಲ್ಲಿ ಸಮಯ ಸಾರಿಣಿಯಂತೆ ಬರುವುದು. ರಾಷ್ಟ್ರಗೀತೆ ಜೊತೆಗೆ ಪ್ರಾರಂಭವಾಗುವ ಶಾಲೆ ವಂದೇ ಮಾತರಂನೊಂದಿಗೆ ಮುಕ್ತಾಯವಾಗುವುದು. ಆ ಮಧ್ಯದಲ್ಲಿ ಎಲ್ಲ ವಿಷಯಗಳು, ವಿಶೇಷವಾದ ಜ್ಞಾನಗಳು ಅದರಲ್ಲಿ ಹರಿದು ಮಕ್ಕಳನ್ನು ತಲುಪುತ್ತದೆ.

ಸಂದೀಪ ಭಟ್ಟರ ಈ ಯೋಚನೆ ಹಾಗೂ ಯೋಚನೆ ಇದೀಗ ಎಲ್ಲ ಪಾಲಕರ ಮನ ಗೆದ್ದಿದೆ. ಸಂದೀಪ ಭಟ್ಟರ ಜೊತೆಗೆ ಅನೇಕ ಶಿಕ್ಷಕರು,ಸಂಪನ್ಮೂಲ ವ್ಯಕ್ತಿಗಳೂ ಕೈ ಜೋಡಿಸಿದ್ದು ಅವರೆಲ್ಲರೂ ಸೇರಿ ಮಕ್ಕಳ ಜ್ಞಾನ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

ವಾಟ್ಸಪ್ ಶಾಲೆಯಲ್ಲಿ ಏನೆಲ್ಲಾ ಇದೆ? ಯಾರೆಲ್ಲಾ ಇದ್ದಾರೆ?

ಈ ಶಾಲೆಯಲ್ಲಿ ಯಾವೆಲ್ಲಾ ವಿಷಯಗಳಿದೆ ಹಾಗೂ ಯಾವ ಯಾವ ಸಂಪನ್ಮೂಲ ವ್ಯಕ್ತಿಗಳಿದ್ದಾರೆ ಎಂಬ ಬಗ್ಗೆ ವಿವರ ಇಲ್ಲಿದೆ.

ಬದುಕಿನ ಪಾಠ
ಅಂಚೆ ಚೀಟಿಯ ವಿಸ್ಮಯ ಜಗತ್ತು
ಡಾ|| ರವೀಂದ್ರ ಭಟ್ಟ ಸೂರಿ – ಹೆಗಡೆ

RELATED ARTICLES  ಟಿ.ಎಸ್.ಎಸ್ ಸೂಪರ್ ಮಾರ್ಕೆಟ್ : ಲಕ್ಕಿ ಡ್ರಾ ಮೂಲಕ ದೀಪಾವಳಿ ಖರೀದಿ ಅದೃಷ್ಟಶಾಲಿಗಳ ಆಯ್ಕೆ

Spoken English
ಶ್ರೀ ಡಿ.ಜಿ.ಪಂಡಿತ್ – ಬರ್ಗಿ

ಮರೆಯಲಾಗದ ಮಾತುಗಳು
ಶ್ರೀ ರಾಮ ದೇವಾಡಿಗ – ಹಟ್ಟಿಅಂಗಡಿ

ವಿಶೇಷ ಚಿತ್ರ ಅತಿಥಿ
ಶ್ರೀ ಜಿ.ಎಂ.ಬೊಮ್ಮನಳ್ಳಿ – ಶಿರಸಿ

ರಂಗಪಠ್ಯ
ಶ್ರೀ ನಾರಾಯಣ ಭಾಗವತ – ಶಿರಸಿ

ದಿನಕ್ಕೊಂದು ಮಂಕುತಿಮ್ಮನ ಕಗ್ಗ
ಶ್ರೀ ಜಿ.ಆರ್. ನಾಯ್ಕ- ಅರೆಅಂಗಡಿ

ದಿನಕ್ಕೊಂದು ಚಿತ್ರ
ಶ್ರೀ ಬಾಲು ಪಟಗಾರ – ಕುಮಟಾ

ಸ್ಪೂರ್ತಿದಾಯಕ ಕಥೆಗಳು
ಶ್ರೀ ದಿನೇಶ ನಾಯ್ಕ ಹಳಿಯಾಳ

ಯೋಗದ ಮಹತ್ವ
ಶ್ರೀ ನಾರಾಯಣ ಶೇರಗಾರ – ಭರತನಹಳ್ಳಿ

ದಿನಕ್ಕೊಂದು ಹಾಡು
ಶ್ರೀ ಪ್ರಶಾಂತ ಸಾವಂತ – ಕಾರವಾರ

ನಿಮಗಿದು ಗೊತ್ತೇ?!
ಶ್ರೀ ಎಸ್ ಎಚ್ ಗೌಡ – ಗುಣವಂತೆ

ದಿನಕ್ಕೊಂದು ರಂಗೋಲಿ
ಶ್ರೀಮತಿ ಸ್ಮಿತಾ ಜೋಷಿ ಶಿರಸಿ

ವಿಶೇಷ ಅತಿಥಿಗಳು
ಶ್ರೀ ಆರ್.ಎಸ್.ಭಟ್ಟ- ನವಿಲಗೋಣ
ಶ್ರೀಮತಿ ಭಾರತಿ ಹೆಗಡೆ – ಅಂಕೋಲಾ
ಶ್ರೀಮತಿ ನಾಗರತ್ನ – ಕುಂದಾಪುರ
ಶ್ರೀಮತಿ ದಿವ್ಯ ಪಟಗಾರ – ಮಂಗಳೂರು
ಶ್ರೀ ವಿನಾಯಕ ಹೆಗಡೆ – ಕಡತೋಕಾ
ಶ್ರೀ ಗಣೇಶ ಜೋಷಿ – ಸಂಕೊಳ್ಳಿ

ದಿನಕ್ಕೊಂದು ವಚನ
ಶ್ರೀ ಎಂ ಎಸ್ ಹೆಗಡೆ – ಹೊನ್ನಾವರ

ದಿನಕ್ಕೊಂದು ಸುಭಾಷಿತ
ಶ್ರೀಮತಿ ಲಲಿತಾ ರಾಮು – ನೀಲಕೋಡ

ದಿನಕ್ಕೊಂದು ನುಡಿಮುತ್ತು
ಶ್ರೀಮತಿ ಸಂಧ್ಯಾ ಗೌರೀಶ್ – ಸಿಂಧೂರು

ವಿಜ್ಞಾನ ವಿಶೇಷ
ಶ್ರೀ ಸದ್ಗುರು ಭಟ್ಟ – ಮಂಚಿಕೇರಿ

ಸಮಾಜಮುಖಿ
ಶ್ರೀಮತಿ ನಾಗರತ್ನ ಅರುಣ್ ಕುಮಾರ್ – ಕತಗಾಲ

ಹಿಂದಿ ಜ್ಞಾನ ವಾಹಿನಿ
ಶ್ರೀಮತಿ ವೈಶಾಲಿ ಶ್ರೀನಿವಾಸ – ಕೊಪ್ಪಳ

RELATED ARTICLES  ಯಕ್ಷಗಾನ ಲೋಕದ ಹಿರಿಯ ಕಲಾವಿದ ಕುಂಬ್ಳೆ ಸುಂದರ್ ರಾವ್ ಇನ್ನಿಲ್ಲ.

ಒಗಟು ಒಗ್ಗರಣೆ
ಶ್ರೀ ಸುಬ್ರಹ್ಮಣ್ಯ ಹೆಗಡೆ – ನೀಲಕೋಡ

Verb Vitamin
ಶ್ರೀಮತಿ ಸರಸ್ವತಿ ಸಂದೀಪ್ – ಹೊಸಾಕುಳಿ

ಮೋಜಿನ ಗಣಿತ
ಶ್ರೀ ಶಿವನಪ್ಪ ಹೊಸುಪ್ಪಾರ – ಗೋಖಾಕ

ಪುರಾಣ ಪಾತ್ರ ವಿಶೇಷ
ಶ್ರೀ ವಿನಾಯಕ ಭಟ್ಟ – ಭಂಡಿವಾಳ

English Grammar
ಶ್ರೀಮತಿ ಭಾಗ್ಯಲಕ್ಷ್ಮಿ ಬೋಡೆ – ಶಿರಸಿ

App of the day
ಶ್ರೀ ಪ್ರಕಾಶ ಭಟ್ಟ ಯಲ್ಲಾಪುರ

Quote of the day
ಶ್ರೀಮತಿ ನಂದಾ ಹೆಬ್ಬಾರ ಯಲ್ಲಾಪುರ

ಪಂಚಾಂಗ, ಅಮರವಾಣಿ, ಪುಸ್ತಕ ಪರಿಚಯ SOME DEEP ಚಿಂತನ, ನಡೆದಷ್ಟೂ ದಾರಿಯಿದೆ ತಿಳಿದಷ್ಟೂ ಜ್ಞಾನವಿದೆ, ಬಳಗದ ಇತರೆ ನಿರ್ವಹಣೆಯನ್ನು
ಶ್ರೀ ಸಂದೀಪ ಭಟ್ಟ – ಹೊಸಾಕುಳಿ ಮಾಡುತ್ತಿದ್ದಾರೆ.

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನನ್ನೊಂದಿಗೆ ಕೈಜೋಡಿಸಿದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಯಾರಿಗೂ ವೈಯಕ್ತಿಕ ಮೆಸೇಜ್ ಕಳಿಸಿ ಕಿರಿಕಿರಿ ಮಾಡದೇ ಕೇವಲ ಕಲಿಕೆಯೊಂದನ್ನೇ ಗುರಿಯಾಗಿಸಿಕೊಂಡ ಬಳಗದ ಸರ್ವ ಸದಸ್ಯರಿಗೂ ಸಂದೀಪ ಭಟ್ಟ ಇದೇ ಸಂದರ್ಭದಲ್ಲಿ ವಂದನೆ ಸಲ್ಲಿಸಿದ್ದಾರೆ.

ಒಟ್ಟಾರೆಯಾಗಿ ಈ ಕೊರೋನಾ ಭಯದ ನಡುವೆಯೂ ಮಕ್ಕಳ ಮನಸ್ಸು ಅರಳಿಸುವ ಇಂತಹ ಶಾಲೆಯನ್ನು ರಚಿಸಿದ ಸಂದೀಪ ಭಟ್ಟರ ಕಾರ್ಯ ಶ್ಲಾಘನೀಯ. ಇದೀಗ ಇದೇ ಮಾದರಿಯ ಉಪ ಶಾಲೆಗಳೂ ರಚನೆಯಾಗುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ಸಂದೀಪ ಭಟ್ಟರ ಶಿಕ್ಷಣ ಸೇವೆ ಹೀಗೆಯೇ ಮುಂದುವರಿಯಲಿ, ಮದ್ದು ಮನಸಿನ ಮಕ್ಕಳ ಬೆಳವಣಿಗೆಗೆ, ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಲಿ ಎಂದು ಹಾರೈಸುತ್ತೇವೆ.