ಕಾರವಾರ : ಹಳಿಯಾಳ- ದಾಂಡೇಲಿಯಲ್ಲಿ 52, ಭಟ್ಕಳದಲ್ಲಿ 10, ಮುಂಡಗೋಡದಲ್ಲಿ 9, ಕಾರವಾರ 11, ಅಂಕೋಲಾದಲ್ಲಿ 8, ಕುಮಟಾದಲ್ಲಿ 14, ಸಿದ್ದಾಪುರ 3, ಶಿರಸಿ 7, ಹೊನ್ನಾವರ 6, ಯಲ್ಲಾಪುರದಲ್ಲಿ ಒಂದು ಕೊರೊನಾ ಪ್ರಕರಣ ದೃಢವಾಗುವ ಮೂಲಕ
ಜಿಲ್ಲೆಯಲ್ಲಿ ಇಂದು 115 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,016ಕ್ಕೆ ಏರಿಕೆಯಾಗಿದೆ..
660 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದರೆ ಜಿಲ್ಲೆಯಲ್ಲಿ ಈವರೆಗೆ 346 ಮಂದಿ ಗುಣಮುಖರಾಗಿದ್ದು ಹತ್ತು ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ.
ಹಳಿಯಾಳ- ದಾಂಡೇಲಿಯಲ್ಲಿ ಅತೀ ಹೆಚ್ಚು ಜನರು ಅಂದರೆ 52 ಜನರಿಗೆ ಸೋಂಕು ತಗುಲಿದೆ, ಭಟ್ಕಳ ತಾಲೂಕಿನ ಮುಶಾನಗರದ 7 ವರ್ಷ ವೃದ್ಧೆ, ಅಜಾಜ್ ನಗರದ 78 ವರ್ಷದ ವೃದ್ಧೆ, ಭಟ್ಕಳ ಮೆನ್ ರೋಡ್‌ನ 45 ವರ್ಷದ ಮಹಿಳೆ , ಸರ್ಪನಕಟ್ಟೆಯ 53 ವರ್ಷದ ಪುರುಷ, ಸೋನಾರಾಕೇರಿಯ 30 ವರ್ಷದ ಪುರುಷ, ಚೌಥನಿಯ 50 ವರ್ಷದ ಪುರುಷ ಹಾಗೂ ತಾಲೂಕಿನ 29,31 ಪುರುಷನ ಹಾಗೂ ಹೊನ್ನಾವರ ಗುಂಡಿಬೈಲನ 35 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕುಮಟಾದ ಖಾಸಗಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳು, ಈ ಹಿಂದೆ ಸೋಂಕು ತಗುಲಿದ್ದ ನಿವೃತ್ತ ಪೊಲೀಸ್ ಅಧಿಕಾರಿಯ ಕುಟುಂಬದ ಓರ್ವ ಸದಸ್ಯರು, ಮಹರಾಷ್ಟ್ರದಿಂದ ಆಗಮಿಸಿದ್ದ ಓರ್ವರಲ್ಲಿ ಮತ್ತು ಈ ಹಿಂದೆ ಕರೋನಾ ಸೋಂಕು ತಗುಲಿದ್ದ ಖಾಸಗಿ ವೈದ್ಯರ ಸಂಪರ್ಕಕ್ಕೆ ಬಂದ ಓರ್ವ ಸೇರಿ, ಕುಮಟಾ ತಾಲೂಕಿನ 3 ವರ್ಷದ ಓರ್ವ ಮಗು, 44 ವರ್ಷದ ಮಹಿಳೆ, 32 ವರ್ಷದ ಮಹಿಳೆ, 54 ವರ್ಷದ ಮಹಿಳೆ, 32 ವರ್ಷದ ಮಹಿಳೆ, 38 ವರ್ಷದ ಪುರುಷ, 26 ವರ್ಷದ ಯುವಕ, 59 ವರ್ಷದ ಪುರುಷ, 29 ವರ್ಷದ ಯುವತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.