ಕುಮಟಾದ ಮಾಸೂರು ಗ್ರಾಮದ ಕಮಲಾಕರ ಪಟಗಾರ ಹಾಗೂ ನೀಲಾ ದಂಪತಿಗಳ ಪುತ್ರಿ ಪೂರ್ಣಿಮಾ ಪಟಗಾರ ಈಕೆ ಪ್ರತಿಭಾನ್ವಿತ ಕನ್ನಡ ಮಾಧ್ಯಮ ದಲ್ಲಿ ಎಸ್. ಎಸ್. ಎಲ್. ಸಿ ಯ ವರೆಗೆ ಕಲಿತು ಪಿ ಯು. ಸಿ ಯಲ್ಲಿ ವಿಜ್ಞಾನ ವಿಭಾಗದಲ್ಲಿ ಬೆಣ್ಣೆ ಸರಕಾರಿ ಪದವಿಪೂರ್ವ್ ಕಾಲೇಜು ನೆಲ್ಲಿಕೇರಿ ಯಲ್ಲಿ ವ್ಯಾಸಂಗ ಮಾಡಿ 95% ಅಂಕ ಪಡೆದು ಕಾಲೇಜಿಗೆ ಎರಡನೇ ಸ್ಥಾನ ಪಡೆದಿದ್ದಾಳೆ. ಅಲ್ಲದೆ ಗಣಿತಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾಳೆ.
ಪ್ರಗತಿ ಟ್ಯುಟೋರಿಯಲ್ಸ್ ನಲ್ಲಿ ವಿಶೇಷ ತರಬೇತಿ ಪಡೆದಿದ್ದು ಸಂಸ್ಥೆಯ ಪ್ರಾಂಶುಪಾಲ ಎಂ. ಜಿ.ಭಟ್ ಈಕೆಯ ಸಾಧನೆಯನ್ನು ಹೆಮ್ಮೆಯಿಂದ ಅಭಿನಂದಿಸಿದ್ದಾರೆ. ಅಂತೆಯೇ ಪ್ರಗತಿ ಟ್ಯುಟೋರಿಯಲ್ಸ ನ ಎಲ್ಲ ಅಧ್ಯಾಪಕರು ಸಾಧನೆಯನ್ನು ಹೆಮ್ಮೆಯಿಂದ ಅಭಿನಂದಿಸಿದ್ದಾರೆ. ಈಕೆ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎನ್ನುವುದು ಎಲ್ಲರ ಹಾರೈಕೆ.