ಕುಮಟಾ : ಈ ವಾರದಲ್ಲಿ ಕೊವಿಡ-19 ಕುಮಟಾ ಪಟ್ಟಣದಲ್ಲಿ ವಿಶೇಷವಾಗಿ ಹರಡಿರುವದನ್ನು ಮನಗಂಡು, ಅಚ೯ಕರ ಮತ್ತು ನಮ್ಮೆಲ್ಲರ ಸುರಕ್ಷತೆ ಯ ದ್ರಷ್ಟಿಯಿಂದ ಜುಲೈ18 ರಿಂದ ಜುಲೈ 31ರ ವರೆಗೆ ಲಾಕ್ ಡೌನ ಸಮಯದಲ್ಲಿದಂತೆ , ಸಾವ೯ಜನಿಕರಿಗೆ ದೇವದಶ೯ನ ಬಂದ್ ಇಡಲು ನಿಧ೯ರಿಸಲಾಗಿದೆ. ಕಾರಣ ಕುಳಾವಿ-ಭಕ್ತಾದಿಗಳು ಈ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡದೆ ಸಹಕರಿಸಬೇಕೆಂದು ಮನವಿ ಇದೆ.ತಮ್ಮ ತಮ್ಮ ಮನೆಗಳಿಂದಲೇ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು.
ಕೈಗಳನ್ನು, ಮುಖವನ್ನು ಆಗಾಗ ಸ್ವಛ್ಛವಾಗಿ ತೊಳೆದು, ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೊವಿಡ್-19 ಹರಡುವ ಪ್ರಕ್ರಿಯೆಗೆ ಕತ್ತರಿ ಹಾಕಬೇಕೆಂದು ವಿನಂತಿ. ವಿಶ್ವವ್ಯಾಪಿಯಾದ ಈ ಮಹಾಮಾರಿ ಬೇಗ ತೊಲಗಿ ಸಕಲರಿಗೂ ಸನ್ಮಂಗಲವಾಗಲಿ ಎಂದು ದೇವಸನ್ನಿಧಿ ಪ್ರಾರ್ಥಿಸುತ್ತೇವೆ ಎಂದು ಅಧ್ಯಕ್ಷರಾದ ಎಂ.ಬಿ.ಪೈ ಹಾಗೂ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.