ಸಿದ್ದಾಪುರ: ಕಲ್ಲಿನಿಂದ ಜಜ್ಜಿದ ರೀತಿಯಲ್ಲಿ ಮಹಿಳೆಯ ಕೊಲೆ ತಾಲೂಕಿನ ತಾಲೂಕಿನ ದೊಡ್ಮನೆ ಸಮೀಪದ ನೆಟ್ಗೋಡ್ ನಲ್ಲಿ ನಡೆದಿದೆ. ಇದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದೇ ಅಥವಾ ಇನ್ನೇನು ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಸ್ಥಳೀಯ ಮಾಹಿತಿ ಲಭ್ಯವಾಗಿದೆ.

ಕೊಲೆಯಾದ ಮಹಿಳೆ ಗೌರಿ ಈಶ್ವರ ನಾಯ್ಕ ಎಂದು ಗುರುತಿಸಲಾಗಿದೆ ಈಕೆಯ ಪತಿ ಕಳೆದ ಮೂರು ವರ್ಷದ ಹಿಂದೆ ಮೃತರಾಗಿದ್ದರು. ಮೃತ ಮಹಿಳೆ ಒಬ್ಬಂಟಿಯಾಗಿ ಮನೆಯಲ್ಲಿ ವಾಸವಾಗಿದ್ದರು. ಮೃತರ ಮಗಳಿಗೆ ಮದುವೆಯಾಗಿದ್ದು, ಮಗ ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

RELATED ARTICLES  ಟಿಕೆಟ್ ಕೈತಪ್ಪಿದ ನಂತರ ಜನತೆಗೆ ಭಾವುಕವಾಗಿ ಬರೆದ ಪತ್ರ ಹಂಚಿಕೊಂಡ ಅನಂತಕುಮಾರ ಹೆಗಡೆ

ವಿದ್ಯುತ್ ಬಿಲ್ ಕೊಡಲು ಹೋದ ಕಲೆಕ್ಟರ್ ನೋಡಿ ವಿಷಯ ತಿಳಿಸಿದ್ದಾರೆ. ಶವದ ಮೇಲೆ ಕಲ್ಲಿನಿಂದ ಜಜ್ಜಿರುವ ಗುರುತು ಪತ್ತೆಯಾಗಿದ್ದು, ಬಟ್ಟೆ ಕೂಡ ಅಸ್ತವ್ಯಸ್ತವಾಗಿದ್ದು, ಅತ್ಯಾಚಾರ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ ಎಂಬ ಮಾಹಿತಿ ದೊರಕಿದೆ.

RELATED ARTICLES   ರಿಲಾಯನ್ಸ್ ದೂರವಾಣಿ ಕಂಪನಿ ವಿರುದ್ದ ಸೋಮವಾರ ಬಾಸಲ್ ನಲ್ಲಿ ಬೃಹತ್ ಪ್ರತಿಭಟನೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸ್ ತನಿಖೆಯ ನಂತರವೇ ಪೂರ್ಣ ಮಾಹಿತಿ ಬರಬೇಕಿದ್ದು ಸ್ಥಳೀಯ ಮಾಹಿತಿ ಆಧರಿಸಿ ವರದಿ ದಾಖಲಿಸಿದೆ.