ಕುಮಟಾ : ಮಾಸೂರು ಬೀಟ್ ಪೋಲೀಸ್ ದಯಾನಂದ ನಾಯ್ಕ ರವರು ಹೆಗಡೆ ಪಂಚಾಯಿತಿ ಎದುರು ಮಾಸ್ಕ್ ಧರಿಸದೇ ಬಂದವರಿಗೆ ತಿಳಿಹೇಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು..

ಹೆಗಡೆ ಗ್ರಾಮ ಪಂಚಾಯಿತಿ ಯಲ್ಲಿ ಪಂಚಾಯಿತಿ ಮಟ್ಟದ ಕೋವಿಡ್ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ಎದುರಿನ ಅಂಗಡಿಗಳಲ್ಲಿ ಮಾಸ್ಕ್ ಧರಿಸದೇ ಜನರು ವ್ಯವಹರಿಸುವುದು ಮತ್ತು ಓಡಾಡುವುದನ್ನು ಕಂಡು ಅಲ್ಲಿಗೆ ತೆರಳಿ ಅವರಿಗೆ ತಿಳಿಹೇಳಿ ಹೊಸ ಮಾಸ್ಕ್ ಕೂಡ ವಿತರಿಸಿ ಜನರ ಪ್ರಶಂಸೆಗೆ ಕಾರಣರಾದರು.

RELATED ARTICLES  ಗೋಕರ್ಣ ಗೌರವಕ್ಕೆ ಭಾಜನರಾದ ಪ ಪೂ ಮಾತಾ ಯೋಗಾನಂದಮಯಿ.

ಇಂತಹ ಸಾಮಾಜಿಕ ಕಳಕಳಿ ಜವಾಬ್ದಾರಿ ಎಲ್ಲರಲ್ಲಿ ಯೂ ಬರುವಂತಾಗಬೇಕು ಎಂದು ಜನರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು