ಕುಮಟಾ : ತಾಲೂಕಿನಲ್ಲಿ ಜುಲೈ 30ರ ವರೆಗೆ ಹಾಫ್ ಡೇ ಲಾಕ್‌ಡೌನ್ ಮುಂದುವರೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಪಟ್ಟಣದಲ್ಲಿ ಹಾಫ್ ಡೇ ಲಾಕ್‌ಡೌನ್ ಮುಂದುವರೆಸಲಾಗುವುದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ವಿವಿಧ ಸಂಘಟನೆಗಳು ಸೇರಿ ಪಕ್ಷಾತೀತವಾಗಿ ನಡೆಸಿದ ಸಾರ್ವಜನಿಕರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳುವ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಬಾರಿಯ ಹಾಫ್ ಡೇ ಲಾಕ್‌ಡೌನ್‌ನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ನಂತರ ಅವಧಿಯಲ್ಲಿ ಸ್ವಯಂ ಪ್ರೇರಿತವಾಗಿ ಹಾಫ್ ಡೇ ಲಾಕ್‌ಡೌನ್ ಜಾರಿಯಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಲಾಗಿದೆ.
ವಕೀಲ ಆರ್ ಜಿ ನಾಯ್ಕ, ಉದ್ಯಮಿಗಳಾದ ಸಂಪತಕುಮಾರ, ಶೈಲೇಶ ನಾಯ್ಕ, ಮೊಂಟಿ ಫರ್ನಾಂಡಿಸ್, ಹರೀಶ ಶೇಟ್, ಗಣೇಶ ಭಟ್ಟ ಬಗ್ಗೋಣ , ಮುಖಂಡ ಹೊನ್ನಪ್ಪ ನಾಯಕ, ಮೊಂಟಿ ಫರ್ನಾಂಡಿಸ್, ಜಿ ಕೆ ಹೆಗಡೆ, ಪ್ರಮುಖರಾದ ಎಂ ಎಂ ಹೆಗಡೆ, ಹರೀಶ ಶೇಟ್, ಸಂಪತಕುಮಾರ, ಜಗದೀಶ ಡಿನಾಯಕ, ಎಸ್ ಟಿ ನಾಯ್ಕ, ಗಣೇಶ ಭಟ್ ಬಗ್ಗೋಣ, ನಾಗರಾಜ ನಾಯ್ಕ, ಶೈಲೇಶ ನಾಯ್ಕ, ಅರವಿಂದ ಪೈ, ಗಜು ನಾಯ್ಕ ಅಳ್ವೆಕೋಡಿ, ಚೇತನ ಶೇಟ್, ರಾಘವೇಂದ್ರ ಗೌಡ, ವಕೀಲ ಶಂಕರಮೂರ್ತಿ ಶಾಸ್ತಿç, ಡಾ. ಗಣೇಶ ನಾಯ್ಕ, ಡಾ. ಶ್ರೀನಿವಾಸ ನಾಯಕ, ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ ಕೆ. ತಾಪಂ ಇಒ ಸಿ ಟಿ ನಾಯ್ಕ, ಪಿಎಸ್‌ಐ ಆನಂದಮೂರ್ತಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.