ಕುಮಟಾ : ಇಂದು ತಾಲೂಕಿನ ಶಾಸಕರಾದ ಶ್ರೀಯುತ ದಿನಕರ ಶೆಟ್ಟಿ ಯವರ ಹುಟ್ಟುಹಬ್ಬದ ನಿಮಿತ್ತ ರಾಮು ಕೆಂಚನ್ ಹಿರೇಗುತ್ತಿ ಅವರ ನೇತೃತ್ವದಲ್ಲಿ ಮಾದನಗೇರಿಯ ಮೀನು ಮಾರುಕಟ್ಟೆಯಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶ ದಲ್ಲಿ ಮಾಸ್ಕ್ ವಿತರಣೆ ಮಾಡಲಾಯಿತು .

1595258302088 1 1

ಈ ಸಂದರ್ಭದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಅರುಣ ಕವರಿ ,ಗೋವಿಂದ ಹರಿಕಾಂತ ಮದನಗೇರಿ , ಕೃಷ್ಣಪ್ಪ ಗೌಡ ಮೂಲೆಕೇರಿ , ಮಂಜುನಾಥ ಗುನಗ ಮಾದನಗೇರಿ ಹಾಗೂ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂತೋಷ ನಾಯಕ ಹಿತ್ತಲಮಕ್ಕಿ ಉಪಸ್ಥಿತರಿದ್ದು ಮೀನು ಮಾರುವ ಮಹಿಳೆಯರಿಗೆ ಮತ್ತು ಸುತ್ತಮುತ್ತಲು ಮಾಸ್ಕ್ ಅವಶ್ಯಕತೆ ಇರುವವರಿಗೆಲ್ಲ ವಿತರಿಸಿ, ಕರೋನಾದ ಇಂತ ಸಂದಿಗ್ದ ಪರಿಸ್ಥಿತಿಯಲ್ಲಿ ಮಾಸ್ಕ ಬಳಕೆ ಮತ್ತು ಸಾಮಾಜಿಕ ಅಂತರದ ಬಗ್ಗೆ ಇನ್ನಷ್ಟು ಜಾಗ್ರತಿ ಮೂಡಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ .

RELATED ARTICLES  ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್ ನ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ.
1595258308366 2 1

ಅಲ್ಲದೇ ಶಾಸಕರ ಹುಟ್ಟುಹಬ್ಬವನ್ನು ಬೇರೆ ರೀತಿಯಲ್ಲಿ ದುಂದುವೆಚ್ಚ ಮಾಡದೆ ಸಮಾಜಕ್ಕೆ ಈ ಕ್ಷಣದಲ್ಲಿ ಅತ್ಯವಶ್ಯಕ ವಿರುವ ಸೇವೆ ಮಾಡಿ ಆಚರಿಸಿದ್ದು ಸಮಾಜಕ್ಕೆ ಮಾದರಿ .

RELATED ARTICLES  ಶ್ರೀ ಶಾಂತಿಕಾ ಪ್ರೊ 2022 ಲೀಗ್ ಕಬಡ್ಡಿ ಸಂಪನ್ನ.