ಈ ಭೂಮಿ ಮೇಲೆ ಅದೆಷ್ಟೋ ವೃಕ್ಷ ಜಾತಿಗಳಿವೆ. ಕೆಲವು ಗಿಡಗಳ ಹಂತದಲ್ಲೇ ಇದ್ದರೆ, ಕೆಲವು ಮಾತ್ರ ಮಹಾವೃಕ್ಷಗಳಾಗಿ ಬೆಳೆಯುತ್ತವೆ. ಆದರೆ ಆಯುರ್ವೇದ ಪ್ರಕಾರ ಈ ಭೂಮಿ ಮೇಲೆ ಇರುವ ಪ್ರತಿಯೊಂದು ಗಿಡ ಯಾವುದೋ ಒಂದು ಔಷಧಿ ಗುಣವನ್ನು ಹೊಂದಿರುತ್ತದೆ. ಕೆಲವು ಗಿಡಗಳು, ವೃಕ್ಷಗಳು ಅನೇಕ ಔಷಧಿ ಗುಣಗಳನ್ನು ಹೊಂದಿರುತ್ತವೆ. ಅಷ್ಟೇಕೆ ನಾವೀಗ ಬಳಸುತ್ತಿರುವ ಬಹಳಷ್ಟು ಇಂಗ್ಲಿಷ್ ಮೆಡಿಸಿನ್‌ಗಳನ್ನು ಗಿಡ, ಬಳ್ಳಿಗಳ ಎಲೆ, ಹಣ್ಣು, ಬೇರಿನಿಂದ ತಯಾರಿಸುತ್ತಾರೆ. ಆದರೆ ಮೊದಲು ಹೇಳಿದಂತೆ ಅನೇಕ ವಿಧದ ಔಷಧಿ ಗುಣಗಳನ್ನು ಹೊಂದಿರುವ ಗಿಡಗಳ ವಿಚಾರಕ್ಕೆ ಬಂದರೆ ಅಂತಹವುಗಳಲ್ಲಿ ಸರಸ್ವತಿ ಗಿಡ ಸಹ ಒಂದು. ಇದನ್ನೇ ಬ್ರಹ್ಮಣಿ, ಬ್ರಾಹ್ಮಿ ಗಿಡ ಎಂದೂ ಕರೆಯುತ್ತಾರೆ. ಈ ಮೂಲಕ ಈ ಗಿಡದ ಮೂಲಕ ಉಂಟಾಗುವ ಅದ್ಭುತವಾದ ಪ್ರಯೋಜನಗಳು ಏನು ಅಂತ ಈಗ ತಿಳಿದುಕೊಳ್ಳೋಣ.
1. ಹೆಸರಿಗೆ ತಕ್ಕಂತೆ ಸರಸ್ವತಿ ಗಿಡದ ಎಲೆಗಳು ಮಿದುಳಿನ ಕೆಲಸವನ್ನು ಉತ್ತಮ ಪಡಿಸುವಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ. ಇದು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ. ನಿತ್ಯ 4 ಸರಸ್ವತಿ ಎಲೆಗಳನ್ನು ಜಗಿದು ತಿನ್ನುತ್ತಿದ್ದರೆ ಮೇಧಸ್ಸು ಹೆಚ್ಚುತ್ತದೆ. ಮಾನಸಿಕ ಒತ್ತಡ ಸಹ ಕಡಿಮೆಯಾಗುತ್ತದೆ.
3. ಶಾಲೆಗೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಈ ಗಿಡದ ಎಲೆಗಳನ್ನು ಚೆನ್ನಾಗಿ ಅರೆದು ರಸ ತೆಗೆದು ಅದನ್ನು ಹಾಲಿನಲ್ಲಿ ಬೆರೆಸಿ ನಿತ್ಯ ಕುಡಿಸಿದರೆ ಅವರ ಜ್ಞಾಪಕಶಕ್ತಿ ಹೆಚ್ಚುತ್ತದೆ. ಓದು ಚೆನ್ನಾಗಿ ಬರುತ್ತದೆ.
3. ಕಾಮಾಲೆ ರೋಗ ಬಂದವರಿಗೆ ಈ ಗಿಡದ ಎಲೆಗಳಿಂದ ತೆಗೆದ ರಸವನ್ನು ನಿತ್ಯ ಕುಡಿಸುತ್ತಿದ್ದರೆ ಕೂಡಲೆ ಚೇತರಿಸಿಕೊಳ್ಳುತ್ತಾರೆ.
4. ಸರಸ್ವತಿ ಎಲೆಗಳ ರಸವನ್ನು ನಿತ್ಯ ಕುಡಿಯುತ್ತಿದ್ದರೆ ಆಯುಸ್ಸು ಹೆಚ್ಚುತ್ತದೆ.
5. ಈ ಗಿಡದ ಎಲೆಗಳಿಂದ ತೆಗೆದ ರಸ ರಕ್ತವನ್ನು ಶುದ್ಧಗೊಳಿಸುತ್ತದೆ.
6. ಸ್ವಲ್ಪ ಓಂಕಾಳು ತೆಗೆದುಕೊಂಡು ಪುಡಿ ಮಾಡಿ ಅದರಲ್ಲಿ ಸರಸ್ವತಿ ಗಿಡದ ಎಲೆಗಳ ರಸವನ್ನು ಬೆರೆಸಿ ತೆಗೆದುಕೊಂಡರೆ ಕೊಲೆಸ್ಟರಾಲ್ ಕಡಿಮೆಯಾಗುತ್ತದೆ.
7. ಈ ಗಿಡ ಎಲೆಗಳನ್ನು ಮಜ್ಜಿಗೆಯಲ್ಲಿ 3 ದಿನಗಳ ಕಾಲ ನೆನೆಸಿ ಒಣಗಿಸಿ ಪುಡಿ ಮಾಡಿಕೊಳ್ಳಬೇಕು. ಇದನ್ನು ನಿತ್ಯ ಟಾನಿಕ್‌ನಂತೆ ಮಕ್ಕಳಿಗೆ ಕೊಡಬೇಕು. ಇದರಿಂದ ಅವರಿಗೆ ಶಕ್ತಿ ಚೆನ್ನಾಗಿ ಬರುತ್ತದೆ.
8. ಸರಸ್ವತಿ ಗಿಡದ ಎಲೆಗಳನ್ನು ನೆರಳಲ್ಲಿ ಒಣಗಿಸಿ ಪುಡಿ ಮಾಡಿ ಅದರಲ್ಲಿ ಜೇನನ್ನು ಬೆರೆಸಿ ತೆಗೆದುಕೊಂಡರೆ ಗಂಟಲಿನ ಕೆರೆತ ಕಡಿಮೆಯಾಗುತ್ತದೆ. ಸ್ವರಪೆಟ್ಟಿಗೆ ವೃದ್ಧಿಯಾಗಿ ಸುಮಧುರ ಕಂಠ ಸ್ವರವೂ ಉಂಟಾಗುತ್ತದೆ. ತೊದಲುವಿಕೆಯನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ.
9. ಸರಸ್ವತಿ ಎಲೆಗಳನ್ನು ನೆರಳಲ್ಲಿ ಒಣಗಿಸಬೇಕು. ಐದು ಬಾದಾಮಿ, ಎರಡು ಮೆಣಸು, ಬಿಸಿ ನೀರು ಹಾಕಿ ಈ ಎಲೆಗಳನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ಅದನ್ನು ತೆಳುವಾದ ಬಟ್ಟೆಯಿಂದ ಶೋಧಿಸಿ, ಸೂಕ್ತ ಜೇನು ಬೆರೆಸಿ 40 ದಿನಗಳ ಕಾಲ ನಿತ್ಯ ಬೆಳಗ್ಗೆ ತೆಗೆದುಕೊಂಡರೆ ಜ್ಞಾಪಕಶಕ್ತಿ ಹೆಚ್ಚುತ್ತದೆ. ಈ ಔಷಧವನ್ನು ಮಾತುಗಳು ಚೆನ್ನಾಗಿ ಬರದ ಮಕ್ಕಳಿಗೆ ಬಳಸುತ್ತಾರೆ.
10. ಮೇಲೆ ತಿಳಿಸಿದ ಅನಾರೋಗ್ಯ ಸಮಸ್ಯೆಗಳಿಗಷ್ಟೇ ಅಲ್ಲ ಸರಸ್ವತಿ ಗಿಡ ಇತರೆ ಕೆಲಸಗಳಿಗೂ ಉಪಯುಕ್ತ. ಇದನ್ನು ಬೆಳೆಸುವುದರಿಂದ ಎಲ್ಲಾ ವಿದಧ ಅನಿಷ್ಟಗಳೂ ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲ ಈ ಗಿಡವನ್ನು ಪೂಜಿಸಿದರೆ ಅಂದುಕೊಂಡ ಕೆಲಸಗಳು ಸಕಾಲದಲ್ಲಿ ನಡೆಯುವ ಜತೆಗೆ ಎಲ್ಲವೂ ಶುಭವೇ ಆಗುತ್ತದಂತೆ.