ಕಾರವಾರ :ಶಿರಸಿ ತಾಲೂಕಿನ 76 ವರ್ಷದ ವೃದ್ಧ ಹಾಗೂ ಭಟ್ಕಳ ತಾಲೂಕಿನ 65 ವರ್ಷದ ವೃದ್ಧೆ ಕೊರೋನಾ ಸೋಂಕಿಗೆ ಒಳಗಾಗಿ ಕಾರವಾರ ಮೆಡಿಕಲ್ ಕಾಲೇಜಿನ ಕೋವಿಡ್ 19 ವಾರ್ಡಿನಲ್ಲಿ ಇಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಇವರಿಬ್ಬರೂ ನಿಮೋನಿಯಾದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಶಿರಸಿ ತಾಲೂಕಿನ 76 ವರ್ಷದ ವೃದ್ಧನಿಗೆ ಹಾಗೂ ಭಟ್ಕಳ ತಾಲೂಕಿನ 65 ವರ್ಷದ ವೃದ್ಧೆಗೆ ಕೊರೋನಾ ಸಹ ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಮ್ಸ್ ಆಸ್ಪತ್ರೆಗೆ ಇವರನ್ನು ರವಾನೆ ಮಾಡಲಾಗಿತ್ತು. ಇಂದು ಅವರು ಕೊನೆಯುಸಿರೆಳೆದಿದ್ದು ಅಂತಿಮ ವಿಧಿ ವಿಧಾನ ಮಾಡಲಾಗಿದೆ.