ಕುಮಟಾ-ಕೊರೊನಾ ಸೋಂಕಿನಿಂದ ನಾನು ಮತ್ತು ನನ್ನ ಕುಟುಂಬ ಸಂಪೂರ್ಣ ಮುಕ್ತರಾಗಿದ್ದೇವೆ ಎಂದು ಡಾ. ಅಶೋಕ ಭಟ್ಟ ಹಳಕಾರ ತಿಳಿಸಿದ್ದಾರೆ. ಪಟ್ಟಣದಲ್ಲಿರುವ ಜನಪ್ರಿಯ ಖಾಸಗಿ ವೈದ್ಯರಲ್ಲಿ ಒಬ್ಬರಾಗಿರುವ ಅವರು ಖಾಸಗಿ ಅಸ್ಪತ್ರೆಯನ್ನು ಇಲ್ಲಿ ಹೊಂದಿದ್ದಾರೆ.
ಇತ್ತೀಚೆಗೆ ಅವರಲ್ಲಿ ಭಟ್ಕಳ ಮೂಲದ ಹಾಲಿ ಬೆಂಗಳೂರು ನಿವಾಸಿ ಮಹಿಳೆ ಚಿಕಿತ್ಸೆ ಪಡೆದಿದ್ದರು. ಈ ಮಹಿಳೆಯ ಮೂಲಕ ಡಾ. ಭಟ್ ಅವರಿಗೆ ನಂತರ ಅವರ ಕುಟುಂಬದ ಸದಸ್ಯರಿಗೆ ಕೊರೊನಾ ಸೋಂಕು ತಗಲಿಕೊಂಡಿದ್ದರಿಂದ ಚಿಕಿತ್ಸೆ ಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿ ಈಗ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿ ೧೦ ದಿನ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕೊರೊನಾ ಕುರಿತು ಯಾರು ಭಯಗೊಳ್ಳುವ ಅವಶ್ಯಕತೆ ಇಲ್ಲ.
ನನ್ನ ಮನೆ ಹಾಗೂ ಅಸ್ಪತ್ರೆಯಿರುವ ಸಂಪೂರ್ಣ ಸಮುಚ್ಚಯ ಸೆನೆಟೈಸ್ ಮಾಡಿಸಿದರು . ಅಗಸ್ಟ ೫ ರಿಂದ ಸಾವ೯ಜನಿರಿಗೆ ನಾನು ವೈದ್ಯಕೀಯ ಸೇವೆ ನೀಡುವ ನನ್ನ ಕಾಯಕ ಆರಂಭಿಸಲಿದ್ದೇನೆ ಎಂದು ಡಾ. ಅಶೋಕ ಭಟ್ಟ ಹಳಕಾರ ಹಳಕಾರ ತಿಳಿಸುತ್ತ ಕೊರೊನಾ ಚಿಕಿತ್ಸೆಗಾಗಿ ನಾನು ಮತ್ತು ನನ್ನ ಕುಟುಂಬ ಆಸ್ಪತ್ರೆ ಸೇರಿಕೊಂಡ ಸಮಯದಲ್ಲಿ ನಮ್ಮ ಯೋಗಕ್ಷೇಮ ವಿಚಾರಿಸಿದ್ದಾರೆಲ್ಲರಿಗು ನಾನು ಆಭಾರಿಯಾಗಿದ್ದೇನೆ ಎಂದರು.